ಹೊಸ ದಿಗಂತ ವರದಿ, ಧಾರವಾಡ:
ಆಕಸ್ಮಿಕನ ಅಗ್ನಿ ಅವಘಡಕ್ಕೆ ಹತ್ತಾರು ರೈತರ ೨೦ಕ್ಕೂ ಹೆಚ್ಚು ಎಕರೆ ಕಬ್ಬಿನ ಗದ್ದೆಗಳು ಬೆಂಕಿಗೆ ಆಹುತಿಯಾಗಿದ ಘಟನೆ ತಾಲೂಕಿನ ರಾಮಾಪೂರ ಗ್ರಾಮದ ಮಂಗಳವಾರ ನಡೆದಿದೆ.
ಗ್ರಾಮದ ರೈತರಾದ ಮಂಜುನಾಥ ಪಾಟೀಲ ೨ ಎಕರೆ ೩೮ ಗುಂಟೆ, ಶಿವಾನಂದ ಕಡ್ಲಿ ೨ ಎಕರೆ ೩೬ ಗುಂಟೆ ಮತ್ತು ಮುದಕಪ್ಪ ಹುಂಡೇಕರ ೫ ಎಕರೆ ೩೭ ಗುಂಟೆ, ಶಿವಪ್ಪ ಹುಣಸಿಕಟ್ಟಿ ೨ ಎಕರೆ ಕಬ್ಬು ಭಸ್ಮವಾಗಿದೆ.
ಮಡಿವಾಳಪ್ಪ ಹುಂಡೇಕಾರ ೩ ಎಕರೆ, ಬಸಪ್ಪ ಹುಣಸಿಕಟ್ಟಿ, ರಾಮಣ್ಣ ಜೆವೋಜಿ ತಲಾ ೨ ಎಕರೆ ಜಮೀನು ಅಗ್ನಿ ದುರಂತಕ್ಕೆ ಬಲಿಯಾಗಿದೆ. ಶಾರ್ಟ್ ಸರ್ಕಿಟ್ಯೂನಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿತ್ತಿದೆ.
ರಾಮಾಪೂರ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಹಠಾತನೆ ಬೆಂಕಿ ಕಾಣಿಸಿಕೊಂಡಿದೆ. ಗಾಳಿ ವೇಗಕ್ಕೆ ಬೆಂಕಿ ಕ್ಷರ್ಣಾಧದಲ್ಲಿಯೇ ಇಡೀ ಗದ್ದಗೆ ಆವರಿಸಿಕೊಂಡು, ಕಟಾವಿಗೆ ಬಂದ ಕಬ್ಬ ಸುಟ್ಟು ಕರಕಲಾಗಿದೆ.
ಅಲ್ಲದೇ, ಸುಮಾರು ೬೦ ಮಾವಿನ ಗಿಡಗಳು, ಕಬ್ಬಿನ ಗದ್ದೆಯಲ್ಲಿದ್ದ ನೀರವಾರಿ ಪೈಪ್, ಸ್ಪಿಂಕ್ಲರ್, ಬೋರವೇಲ್ ಕ್ಯಾಪ್ ಸೇರಿದಂತೆ ಕೃಷಿ ಚಟುವಟಿಕೆ ಸಾಮಗ್ರಿಗಳು ಸಹ ಅಗ್ನಿ ದರಂತಕ್ಕೆ ಬಲಿಯಾಗಿವೆ.

