ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ರಣ್‌ವೀರ್ ಸಿಂಗ್ ಅಭಿನಯದ ಧುರಂಧರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಬಾಚಿಕೊಂಡಿದೆ. ಇದೀಗ ಧುರಂಧರ್ ಸಿನಿಮಾ ಒಟಿಟಿಗೆ ಬರಲಿದೆ. ಅಭಿಮಾನಿಗಳು ಮನೆಯಲ್ಲಿ ಕುಳಿತೆಯೇ ಸಿನಿಮಾ ವೀಕ್ಷಣೆ ಮಾಡಬಹುದಾಗಿದೆ.
ಧುರಂಧರ್ ಜನವರಿ 30 ರಿಂದ ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ರಣವೀರ್ ಸಿಂಗ್ ಅಭಿನಯದ ಸ್ಪೈ ಥ್ರಿಲ್ಲರ್ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ, ಆದಾಗ್ಯೂ, ಧುರಂಧರ್ OTT ಬಿಡುಗಡೆ ದಿನಾಂಕದ ಬಗ್ಗೆ ಸಸ್ಪೆನ್ಸ್ ಇದೆ.
ಆದಿತ್ಯ ಧಾರ್ ನಿರ್ದೇಶನದ ಧುರಂಧರ್ ಚಿತ್ರವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಲೇ ಇದೆ. ಈ ಚಿತ್ರವು 1,000 ಕೋಟಿ ರೂ. ಕ್ಲಬ್‌ಗೆ ಸೇರಿದ ನಂತರ ಭಾರಿ ಯಶಸ್ಸನ್ನು ಕಂಡಿತು.



