ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಗತ್ಯ ಸೌಲಭ್ಯಗಳನ್ನು ಪಡೆದಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆ, ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಮತ್ತು ಸದಸ್ಯರು ಇಂದು ಜೈಲಿಗೆ ಭೇಟಿ ನೀಡಲಿದ್ದಾರೆ.
ದರ್ಶನ್ ಎರಡನೇ ಬಾರಿ ಜೈಲು ಸೇರಿರುವ ವೇಳೆ ಜೈಲಿನ ಪರಿಸ್ಥಿತಿಗಳನ್ನು “ನರಕದಂತೆ” ಆಗಿದೆ ಎಂದು ತಿಳಿಸಿದ್ದಾರೆ. ಹಾಸಿಗೆ, ತಲೆ ದಿಂಬು ಸೇರಿದಂತೆ ಅಗತ್ಯ ಸೌಲಭ್ಯಗಳು ನೀಡಲಾಗಿಲ್ಲ ಎಂದು ಅವರು ಅರ್ಜಿ ಹಾಕಿದ್ದರು.
ಇಂದು ತಂಡ ದರ್ಶನ್ ಇರುವ ಕ್ವಾರೆಂಟೈನ್ ಸೆಲ್ ಸೇರಿದಂತೆ ಜೈಲಿನ ವಿವಿಧ ವಿಭಾಗಗಳನ್ನು ಪರಿಶೀಲಿಸಲು ಅಧಿಕಾರಿಗಳು ಜೈಲಿಗೆ ಭೇಟಿನೀಡಲಿದ್ದಾರೆ. ಜೈಲಿನ ಮ್ಯಾನ್ಯುವಲ್ ಪ್ರಕಾರ ನೀಡಲಾಗಿರುವ ವಸ್ತುಗಳು ಎಲ್ಲವನ್ನೂ ನೀಡಲಾಗಿದೆಯೇ?, ದರ್ಶನ್‌ಗೆ ಹಾಸಿಗೆ ಮತ್ತು ತಲೆ ದಿಂಬು ಸರಿಯಾಗಿ ನೀಡಲಾಗಿದೆಯೇ? ಎಂಬುದು ಪರೀಕ್ಷೆಗೆ ಒಳಪಡಲಿದೆ. ಪರಿಶೀಲನೆಯ ನಂತರ, ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ದರ್ಶನ್ ಹೇಳಿಕೆ ಪಡೆದು ವರದಿ ತಯಾರಿಸುತ್ತಾರೆ.
ಈ ವರದಿಯನ್ನು ಅನುಚ್ಛೇದ ಅ.18ರ ಅಡಿಯಲ್ಲಿ ಕೋರ್ಟ್‌ಗೆ ಸಲ್ಲಿಸಲಾಗುವುದು. ಹೀಗಾಗಿ, ದರ್ಶನ್ ಜೈಲು ಸೌಲಭ್ಯಗಳಿಗೆ ಸಂಬಂಧಿಸಿದ ವಾಸ್ತವ ಪರಿಸ್ಥಿತಿಯನ್ನು ಸ್ಪಷ್ಟಪಡಿಸುವುದು ಮತ್ತು ಭವಿಷ್ಯದಲ್ಲಿ ಅಗತ್ಯ ಸೌಲಭ್ಯಗಳ ಸರಬರಾಜು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ.