February 14, 2026
Saturday, February 14, 2026
spot_img

ಜೈಲಿನಲ್ಲಿ ಪಾಕ್ ಮಿಲಿಟರಿ ಹಿಂಸೆಗೆ ಕಣ್ಣಿನ ದೃಷ್ಟಿ ಕಳೆದುಕೊಂಡ್ರಾ ಇಮ್ರಾನ್‌ ಖಾನ್‌?

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಪಾಕ್ ನ ಅದಿಯಾಲ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಇತ್ತೀಚೆಗೆ ತಮ್ಮ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ ಎಂಬ ಸುದ್ದಿ ಹರಡಿದ್ದು, ಭಾರಿ ಸಂಚಲನ ಮೂಡಿಸಿತ್ತು. ಈ ಬೆನ್ನಲ್ಲೇ ಅವರನ್ನು ಬೇರೆ ಜೈಲಿಗೆ ಸ್ಥಳಾಂತರಿಸಲಾಗುತ್ತದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಹೇಳಿದ್ದಾರೆ.

ಇಮ್ರಾನ್‌ ಖಾನ್‌ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ, ಆರೋಗ್ಯ ಕ್ಷೀಣಿಸಿದ್ದು, ತಮ್ಮ ಕಣ್ಣುಗಳನ್ನೇ ಕಳೆದುಕೊಂಡಿದ್ದಾರೆ ಎಂಬ ಸುದ್ದಿಗಳು ಹರಡಿಕೊಂಡಿದ್ದವು. ಇತ್ತ ಕುಟುಂಬಸ್ಥರು ಸಹ ಇಮ್ರಾನ್‌ ಖಾನ್‌ ಅವರನ್ನು ಡೆತ್‌ ಸೆಲ್‌ ನಂತೆ ಇರುವ ಕೋಣೆಯಲ್ಲಿ ಇರಿಸಲಾಗಿದೆ ಎಂದು ಆರೋಪ ಮಾಡಿದ್ದರು.

ಇದರ ಬೆನ್ನಲ್ಲೇ ಮೊಹ್ಸಿನ್ ನಖ್ವಿ , ಇಸ್ಲಾಮಾಬಾದ್‌ ನ್ಯಾಯಾಲಯ ಇಮ್ರಾನ್‌ ಖಾನ್‌ ಅವರನ್ನು ಭ್ರಷ್ಟಚಾರ ಹಗರಣದಲ್ಲಿ ದೋಷಿ ಎಂದು ತೀರ್ಪು ನೀಡಿದೆ. ಈ ಹಿನ್ನಲೆಯಲ್ಲಿ ಅವರನ್ನು ರಾಜಧಾನಿಯಲ್ಲಿರುವ ಜೈಲಿಗೆ ಸ್ಥಳಾಂತರಿಸಲಾಗುವುದು. ಇಸ್ಲಾಮಾಬಾದ್‌ನ ಹೊಸ ಜೈಲು 2 ತಿಂಗಳೊಳಗೆ ಸಂಪೂರ್ಣವಾಗಿ ನಿರ್ಮಾಣವಾಗಲಿದ್ದು, ನಂತರ ಅವರನ್ನು ಅಲ್ಲಿಗೆ ಸ್ಥಳಾಂತರಿಸುತ್ತೇವೆ . ಅಲ್ಲಿ ಅವರಿಗೆ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಗಳು ಇರಲಿವೆ ಎಂದು ಹೇಳಿದ್ದಾರೆ.

ಇಮ್ರಾನ್‌ ಖಾನ್‌ ಗೆ ಅಮಾನವೀಯ ಮತ್ತು ಕಾನೂನುಬಾಹಿರ ಚಿಕಿತ್ಸೆಯಿಂದಾಗಿ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದೆ ಎಂಬ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪಾಕಿಸ್ತಾನದ ಸುಪ್ರೀಂ ಕೋರ್ಟ್‌ ಅಮಿಕಸ್ ಕ್ಯೂರಿ ಸಲ್ಮಾನ್ ಸಫ್ದರ್ ಅವರನ್ನು ನೇಮಿಸಿತ್ತು. ಈ ವರದಿಯಲ್ಲಿ, ಅದಿಯಾಲ ಜೈಲಿನಲ್ಲಿ ಸುಮಾರು ಮೂರು ವರ್ಷಗಳ ಕಾಲ ವೈದ್ಯಕೀಯ ಚಿಕಿತ್ಸೆ ವಿಳಂಬವಾದ ಕಾರಣ, ಇಮ್ರಾನ್ ಖಾನ್ ಅವರ ಬಲಗಣ್ಣಿನ ಸುಮಾರು 85% ದೃಷ್ಟಿ ಕಳೆದುಕೊಂಡಿದ್ದಾರೆ ಈ ವಿಚಾರವನ್ನು ಜೈಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೆ ಅವರು ಚಿಕಿತ್ಸೆ ಒದಗಿಸದೆ ಇದ್ದು, ಇದು ಕ್ಷೀಣವಾಗಿದ್ದು, ಅವರ ಇಮ್ರಾನ್‌ ಖಾನ್‌ ಅವರ ಕಣ್ಣು ಹೆಪ್ಪುಗಟ್ಟಿರುವುದು ಕಂಡಿದ್ದು, ಕೇವಲ 15% ದೃಷ್ಟಿ ಉಳಿದಿದೆ ಎಂದು ತಿಳಿಸಿದೆ.

2 ವರ್ಷಕ್ಕೂ ಅಧಿಕ ಕಾಲ ಇಮ್ರಾನ್‌ ಅವರನ್ನು ಜೈಲಿನಲ್ಲಿ ಏಕಾಂತವಾಗಿ ಇರಿಸಲಾಗಿದ್ದು, ನಿಯಮಿತವಾಗಿ ವೈದ್ಯಕೀಯ ಪರೀಕ್ಷೆಗಳನ್ನು ನೀಡದೆ, ದಿನನಿತ್ಯದ ಆರೋಗ್ಯ ಮೇಲ್ವಿಚಾರಣೆಯಂತಹ ಸೌಲಭ್ಯಗಳನ್ನೂ ಸಹ ನಿರಾಕರಿಸಲಾಗಿದೆ. ಅಲ್ಲದೆ, ಇಮ್ರಾನ್‌ ಖಾನ್‌ ಅವರೊಂದಿಗೆ ತಮ್ಮ ಕುಟುಂಬ ಹಾಗೂ ಕಾನೂನು ಸಲಹೆಗಾರರ ಸಂಪರ್ಕವನ್ನು ತೀವ್ರವಾಗಿ ನಿರ್ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !