January19, 2026
Monday, January 19, 2026
spot_img

ಕೆರೆ, ಸ್ಮಶಾನ ಜಾಗ ಕಬಳಿಸಿದ್ರಾ ಕೃಷ್ಣಬೈರೇಗೌಡ? ಬಿಜೆಪಿ ಆರೋಪ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಸೈಟ್ ಹಗರಣ ಆರೋಪ ಇರುವಾಗಲೇ ಸಂಪುಟದ ಮತ್ತೋರ್ವ ಸಚಿವ ಕೃಷ್ಣಬೈರೇಗೌಡ ವಿರುದ್ಧ ಅಕ್ರಮವಾಗಿ ಸ್ಮಶಾನ ಜಾಗವನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡ ಆರೋಪ ಕೇಳಿ ಬಂದಿದೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ನಾಯಕರಾದ ಚಲವಾದಿ ನಾರಾಯಣಸ್ವಾಮಿ ಹಾಗೂ ಎನ್ ರವಿಕುಮಾರ್ ಕೋಲಾರ ನರಸಾಪುರ ಹೋಬಳಿಯ ಗರುಡನಪಾಳ್ಯ ಗ್ರಾಮದ ಸರ್ವೆ ನಂ. 47ರಲ್ಲಿ 1 ಎಕರೆ ಜಾಗ, ಸರ್ವೆ 46ರಲ್ಲಿ 20.16 ಎಕರೆ ಜಾಗವನ್ನು ಕಂದಾಯ ಸಚಿವರು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ ಅಂತ ಆರೋಪಿಸಿದ್ದಾರೆ.

ದಾಖಲೆ ಪ್ರಕಾರ ಇದು ಕೆರೆ ಜಮೀನಾಗಿದ್ದು, ಸ್ಮಶಾನಕ್ಕೆ ಬಿಡಲಾಗಿದೆ. ಮೂಲ ದಾಖಲೆಗಳ ಪ್ರಕಾರ ಸರ್ಕಾರಿ ಸ್ಮಶಾನ ಖರಾಬು ಅಂತ ಇದೆ. ಮ್ಯುಟೇಷನ್‌ನಲ್ಲಿಯೂ ಖರಾಬ್ ಅಂತಿದೆ. ಆದರೆ ಈ ಜಮೀನು ಕಂದಾಯ ಸಚಿವರ ಖಾತೆಗೆ ಹೇಗೆ ಬರುತ್ತದೆ ಅಂತ ಚಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ. ಮಿಸ್ಟರ್ ಕ್ಲೀನ್ ಎಂದು ಬಿಂಬಿಸಿಕೊಳ್ಳುವ ಕೃಷ್ಣಬೈರೇಗೌಡ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. 

ಎನ್.ರವಿಕುಮಾರ್ ಮಾತನಾಡಿ, ಕೆರೆ ಹಾಗೂ ಸ್ಮಶಾನ ಖಾಸಗಿ ವ್ಯಕ್ತಿಗಳ ಹೆಸರಿಗೆ ಮಾಡಿಕೊಳ್ಳಲು ಆಗುವುದಿಲ್ಲ. ಅಲ್ಲಿ ಸಿಲ್ವರ್ ಟೀಕ್ ಬೆಳೆಯುತ್ತಾರಂತೆ. ಇದನ್ನು ತನಿಖೆಗೆ ಒಳಪಡಿಸಬೇಕು ಎಂದು ಹೇಳಿದರು.

ಬಿಜೆಪಿಗರ ಆರೋಪಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯಿಸಿ, ಖರಾಬು, ಸ್ಮಶಾನ ಜಾಗ ಹೌದೋ? ಅಲ್ವೋ ಎಂಬುದು ತನಿಖೆ ಆಗಲಿ. ಬಿಜೆಪಿ ಬಳಿ ಏನು ದಾಖಲೆ ಇದೆ ಕೊಡಲಿ. ಜಿಲ್ಲಾಧಿಕಾರಿಗಳಿಗೆ, ಲೋಕಾಯುಕ್ತಕ್ಕೆ ದೂರು ಕೊಡಲಿ ಎಂದು ಸವಾಲು ಹಾಕಿದ್ದಾರೆ.

Must Read

error: Content is protected !!