Saturday, September 20, 2025

ಉಗ್ರ ಹಫೀಜ್ ಸಯೀದ್ ಭೇಟಿಗೆ ಮನಮೋಹನ್ ಸಿಂಗ್ ಥ್ಯಾಂಕ್ಸ್‌ ಹೇಳಿದ್ರಾ? ಸ್ಫೋಟಕ ಹೇಳಿಕೆ ನೀಡಿದ ಯಾಸಿನ್ ಮಲಿಕ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಲಷ್ಕರ್-ಎ-ತೈಬಾದ ಸಂಸ್ಥಾಪಕ ಹಫೀಜ್ ಸಯೀದ್ ನನ್ನು ಭೇಟಿಯಾಗಿದ್ದಕ್ಕಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಧನ್ಯವಾದ ಹೇಳಿದ್ದರು ಎಂದು ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಪ್ರತ್ಯೇಕತಾವಾದಿ ಗುಂಪು ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ ಮುಖ್ಯಸ್ಥ ಯಾಸಿನ್ ಮಲಿಕ್ ಹೇಳಿದ್ದಾರೆ.

ಇದರಲ್ಲಿ 26/11 ಮುಂಬೈ ದಾಳಿ ಪ್ರಕರಣದ ಸಂಚುಕೋರ ಮತ್ತು ಲಷ್ಕರ್-ಎ-ತೈಬಾ (ಎಲ್ಇಟಿ) ಸಂಸ್ಥಾಪಕ ಹಫೀಜ್ ಸಯೀದ್ ನನ್ನು ಭೇಟಿಯಾಗಿದ್ದಕ್ಕಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಯೋತ್ಪಾದಕ ಯಾಸಿನ್ ಮಲಿಕ್ ಗೆ ವೈಯಕ್ತಿಕವಾಗಿ ಧನ್ಯವಾದ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದರೆ ಇದು ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆಗಾಗಿ ನಡೆದಿರುವುದು. ಭಾರತೀಯ ಗುಪ್ತಚರ ಅಧಿಕಾರಿಗಳ ಕೋರಿಕೆಯ ಮೇರೆಗೆ ನಡೆಸಲಾಗಿದೆ ಎಂದು ಹೇಳಲಾಗಿದೆ.

2006 ರಲ್ಲಿ ಪಾಕಿಸ್ತಾನದಲ್ಲಿ ಲಷ್ಕರೆ ತೈಬಾ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಭೇಟಿಯಾಗಲು ಭಾರತೀಯ ಗುಪ್ತಚರ ಅಧಿಕಾರಿಗಳು ಕೇಳಿಕೊಂಡಿದ್ದರು ಎಂದು ಆರೋಪಿಸಿ ಭಯೋತ್ಪಾದಕ ಯಾಸಿನ್ ಮಲಿಕ್ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್ ಅನ್ನು ಬಿಜೆಪಿ ಹಂಚಿಕೊಂಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿಯ ಐಟಿ ಮುಖ್ಯಸ್ಥ ಅಮಿತ್ ಮಾಳವಿಯಾ, ಇದು ಆಘಾತಕಾರಿ ಎಂದು ಹೇಳಿದ್ದಾರೆ.

https://x.com/amitmalviya/status/1968908965170790871?ref_src=twsrc%5Etfw%7Ctwcamp%5Etweetembed%7Ctwterm%5E1968908965170790871%7Ctwgr%5Ef24d174b5ff911168fb7879cb83bb9fd821919f9%7Ctwcon%5Es1_&ref_url=https%3A%2F%2Fkannada.news18.com%2Fnews%2Fnational-international%2Fyasin-malik-claims-ex-pm-manmohan-singh-thanked-him-for-meeting-hafiz-saeed-sparks-fresh-controversy-akd-2188617.html

2005ರಲ್ಲಿ ಕಾಶ್ಮೀರದಲ್ಲಿ ಸಂಭವಿಸಿದ ಭೂಕಂಪದ ಬಳಿಕ ಪಾಕಿಸ್ತಾನಕ್ಕೆ ಭೇಟಿ ನೀಡುವ ಮೊದಲು ಗುಪ್ತಚರ ದಳದ (ಐಬಿ) ಮಾಜಿ ವಿಶೇಷ ನಿರ್ದೇಶಕ ವಿಕೆ. ಜೋಶಿ ದೆಹಲಿಯಲ್ಲಿ ತಮ್ಮನ್ನು ಭೇಟಿಯಾಗಿದ್ದರು. ಭಯೋತ್ಪಾದಕರು ಮತ್ತು ರಾಜಕೀಯ ನಾಯಕರ ನಡುವೆ ಶಾಂತಿ ಮಾತುಕತೆಗಾಗಿ ಜೋಶಿ ಮಲಿಕ್ ತಮ್ಮನ್ನು ಒತ್ತಾಯಿಸಿದ್ದರು ಎಂದು ಮಲಿಕ್ ತಿಳಿಸಿದ್ದಾನೆ.

ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕಾದರೆ ಭಯೋತ್ಪಾದಕ ನಾಯಕರನ್ನು ಸೇರಿಸಿಕೊಳ್ಳಲೇಬೇಕು ಮಲಿಕ್, ಪಾಕಿಸ್ತಾನದಲ್ಲಿ ನಡೆದ ಸಮಾರಂಭದಲ್ಲಿ ಸಯೀದ್ ಮತ್ತು ಯುನೈಟೆಡ್ ಜಿಹಾದ್ ಕೌನ್ಸಿಲ್‌ನ ಇತರ ನಾಯಕರನ್ನು ಭೇಟಿ ಮಾಡಿರುವುದಾಗಿ ತಿಳಿಸಿದ್ದಾನೆ. ಸಯೀದ್ ಆಯೋಜಿಸಿದ್ದ ಜಿಹಾದಿ ಗುಂಪುಗಳ ಸಭೆಯಲ್ಲಿ ಮಲಿಕ್ ಇಸ್ಲಾಮಿಕ್ ಬೋಧನೆಗಳನ್ನು ಉಲ್ಲೇಖಿಸಿ ಹಿಂಸೆಯ ಬದಲು ಶಾಂತಿಯನ್ನು ಆರಿಸಿಕೊಳ್ಳುವಂತೆ ಒತ್ತಾಯಿಸುವ ಭಾಷಣ ಮಾಡಿದ್ದೆ. ಆದರೆ ಇದನ್ನೇ ತನ್ನ ವಿರುದ್ಧ ಬಳಸಿಕೊಳ್ಳಲಾಗಿದೆ. ಪಾಕಿಸ್ತಾನದ ಭಯೋತ್ಪಾದಕ ಗುಂಪುಗಳೊಂದಿಗಿನ ಸಂಪರ್ಕದ ಪುರಾವೆಯಾಗಿ ಈ ಸಭೆಯ ಚಿತ್ರಗಳನ್ನು ಸಾಕ್ಷಿಯಾಗಿ ಮಾಡಲಾಗಿದೆ ಎಂದು ಹೇಳಿದ್ದಾನೆ.

ತಾನು ಅಲ್ಲಿಂದ ಮರಳಿದ ಬಳಿಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನೇರವಾಗಿ ಭೇಟಿಯಾಗುವಂತೆ ಕೇಳಿಕೊಳ್ಳಲಾಗಿತ್ತು. ಆ ದಿನವೇ ಸಂಜೆ ದೆಹಲಿಯಲ್ಲಿ ಆಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ಅವರ ಸಮ್ಮುಖದಲ್ಲಿ ಸಿಂಗ್ ಅವರನ್ನು ತಾನು ಭೇಟಿಯಾಗಿದ್ದೆ. ಈ ವೇಳೆ ಸಿಂಗ್ ಅವರು ಶಾಂತಿ ಮಾತುಕತೆಗೆ ಸಹಕರಿಸಿರುವುದಕ್ಕಾಗಿ ತಮಗೆ ವೈಯಕ್ತಿಕವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ ಎಂದು ಆತ ತಿಳಿಸಿದ್ದಾನೆ.

ಅವರನ್ನು ‘ಕಾಶ್ಮೀರದಲ್ಲಿ ಅಹಿಂಸಾತ್ಮಕ ಚಳವಳಿಯ ಪಿತಾಮಹ’ ಎಂದು ಬಣ್ಣಿಸಿದರು ಎಂದು ಮಲಿಕ್ ಆರೋಪಿಸಿದ್ದಾನೆ. ಇದು ಅವರ ಕ್ರಮಗಳಿಗೆ ಸರ್ಕಾರದ ಅನುಮೋದನೆಯನ್ನು ತೋರಿಸುತ್ತದೆ ಎಂದು ಮಲಿಕ್ ಹೇಳಿದ್ದು, ಅವರು ಸ್ವತಂತ್ರವಾಗಿ ಭಯೋತ್ಪಾದಕರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದರು ಎಂಬ ಆರೋಪವನ್ನು ತಳ್ಳಿಹಾಕಿದರು.
ಯಾಸಿನ್ ಮಲಿಕ್ ತನ್ನ ಮತ್ತು ಮಾಜಿ ಪ್ರಧಾನಿ ಸಿಂಗ್ ಕೈಕುಲುಕುತ್ತಿರುವ ಫೋಟೋವನ್ನು ಉಲ್ಲೇಖಿಸಿ ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ.

ತಾನು ಸಿಂಗ್ ಅವರನ್ನು ಮಾತ್ರವಲ್ಲ ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಐ.ಕೆ. ಗುಜ್ರಾಲ್, ಮಾಜಿ ಗೃಹ ಮತ್ತು ಹಣಕಾಸು ಸಚಿವ ಪಿ ಚಿದಂಬರಂ, ಮಾಜಿ ಗೃಹ ಸಚಿವ ರಾಜೇಶ್ ಪೈಲಟ್ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಹಲವು ಉನ್ನತ ರಾಜಕೀಯ ನಾಯಕರನ್ನು ಭೇಟಿ ಮಾಡಿ ಹಲವು ಪ್ರಮುಖ ವಿಚಾರಗಳ ಬಗ್ಗೆ ಮಾತುಕತೆ ನಡೆಸಿರುವುದಾಗಿ ಮಲಿಕ್ ಹೇಳಿದ್ದಾನೆ ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ