ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹಾಸ್ಯ ನಟ ರಾಜು ತಾಳಿಕೋಟೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿರುವ ಸಿನಿಮಾದಲ್ಲಿ ರಾಜು ತಾಳಿಕೋಟೆ ಹಾಸ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ನಡೆಯತ್ತಿದೆ. ಈ ಸಿನಿಮಾ ಶೂಟಿಂಗ್‌ಗಾಗಿ ಉಡುಪಿಯಲ್ಲಿ ಬೀಡುಬಟ್ಟಿದ್ದ ರಾಜು ತಾಳಿಕೋಟೆಗೆ ಎದೆನೋವು ಕಾಣಿಸಿಕೊಂಡ ಹೃದಯಾಘಾತ ಸಂಭವಿಸಿದೆ.
ಭಾನುವಾರ ಬೆಳಗ್ಗಿನಿಂದ ಸಂಜೆವರೆಗೂ ಸಿನಿಮಾ ಶೂಟಿಂಗ್‌ನಲ್ಲಿ ರಾಜು ತಾಳಿಕೋಟೆ ಪಾಲ್ಗೊಂಡಿದ್ದರು. ರಾತ್ರಿಯಾಗುತ್ತಿದ್ದಂತೆ ವಿಶ್ರಾಂತಿಗೆ ಜಾರಿದ್ದರು. ಈ ವೇಳೆ ರಾಜು ತಾಳಿಕೋಟೆಗೆ ಎದೆನೋವು ಕಾಣಿಸಿಕೊಂಡಿದೆ. ತಡರಾತ್ರಿ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಮುಂಜಾನೆ 2.30ರ ಸುಮಾರಿಗೆ ಉಡುಪಿಯ ಕೆಂಎಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮುಂಜಾನೆಯಿಂದ ಆಸ್ಪತ್ರೆ ತೀವ್ರ ನಿಘಾ ಘಚಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜು ತಾಳಿಕೋಟೆ ಸಂಜೆಯಾಗುತ್ತಿದ್ದಂತೆ ಮತ್ತೆ ಹದಗೆಟ್ಟಿದೆ. ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದ ತಾಳಿಕೋಟೆ ಸಂಜೆ 5.30ರ ಸುಮಾರಿಗೆ ನಿಧನರಾಗಿದ್ದಾರೆ. 59 ವರ್ಷದ ರಾಜು ತಾಳಿಕೋಟೆ ನಿಧನಕ್ಕೆ ಹಲವು ಸಂತಾಪ ಸೂಚಿಸಿದ್ದಾರೆ.