ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀರಾಮ ಮಂದಿರ ನಿರ್ಮಾಣದ ನಂತರ ನಗರದಲ್ಲಿ ನಡೆಯುತ್ತಿರುವ ಧಾರ್ಮಿಕ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೊಸ ಆಯಾಮ ಪಡೆದುಕೊಳ್ಳುತ್ತಿವೆ. ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಿರುವ ಈ ಪವಿತ್ರ ಕ್ಷೇತ್ರದಲ್ಲಿ ಇತ್ತೀಚೆಗೆ ಪ್ರಧಾನಿಯವರು ಧರ್ಮಧ್ವಜ ಸ್ಥಾಪನೆ ಮಾಡಿದರು. ಈ ಸಂದರ್ಭದಲ್ಲಿ ಅವರ ಕೈಗಳು ನಡುಗಿದ್ದವು ಎಂಬಂತಹ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿತ್ತು. ಇದು ನಿಜವಾಗಲೂ ಕೈ ನಡುಕವೇ ಅಥವಾ ಯಾವುದಾದ್ರೊಂದು ವಿಧಿಯ?
ಆಧ್ಯತ್ಮದ ಪ್ರಕಾರ ಇದು “ನಾಗ ಹಸ್ತ ಕಂಪನ” ಎನ್ನಲಾಗುತ್ತೆ. ಇದು ಅತ್ಯಂತ ಸೂಕ್ಷ್ಮ ಆಧ್ಯಾತ್ಮಿಕ ವಿಧಾನವೆಂದು ಪರಿಗಣಿಸಲಾಗುತ್ತದೆ. ಕೈ ಬೆರಳುಗಳ ನಾಜೂಕಾದ ಕಂಪನದ ಮೂಲಕ ದೇಹದೊಳಗಿನ ಸುಪ್ತ ಚೇತನಶಕ್ತಿಯನ್ನು ಜಾಗೃತಗೊಳಿಸುವುದೇ ಈ ವಿಧಿಯ ಮೂಲ ಉದ್ದೇಶ. ಯೋಗ ಶಾಸ್ತ್ರದ ಪ್ರಕಾರ, ಈ ಕಂಪನದಿಂದ ಕುಂಡಲಿನಿ ಶಕ್ತಿ ಹಾಗೂ ಅನಾಹತ ಚಕ್ರಗಳಲ್ಲಿ ಚಲನೆ ಉಂಟಾಗಿ, ಮಾನಸಿಕ ಸ್ಥಿರತೆ ಮತ್ತು ಆಧ್ಯಾತ್ಮಿಕ ಜಾಗೃತಿ ಹೆಚ್ಚುತ್ತದೆ ಎಂದು ನಂಬಲಾಗುತ್ತದೆ.
ಉಪನಿಷತ್ತಿನ ದೃಷ್ಟಿಯಲ್ಲಿ ಸರ್ಪವನ್ನು ಭಯದ ಪ್ರತೀಕವಾಗಿ ಅಲ್ಲ, ಜ್ಞಾನ ಮತ್ತು ಜಾಗೃತಿಯ ರೂಪವಾಗಿಯೇ ಗೌರವಿಸಲಾಗುತ್ತದೆ. ನಾಗರಾಜನು ದೇಹದ ಮಧ್ಯವಾಹಿನಿಯಲ್ಲಿ ಇರುವ ಪ್ರಾಣಶಕ್ತಿಯ ಸಂಕೇತವೆಂಬ ವಿವರಣೆಯೂ ಇಲ್ಲಿ ಸ್ಮರಿಸಬಹುದು.

