Friday, October 31, 2025

ನಿಮ್ಮ ಕುಟುಂಬದಲ್ಲೇ ಇದೆಲ್ಲ ಆದಾಗ ನಿದ್ದೆ ಮಾಡ್ತಾ ಇದ್ರಾ? ದೊಡ್ಮನೆ ವಿರುದ್ಧ ಯುವ ಪತ್ನಿ ಶ್ರೀದೇವಿ ಆಕ್ರೋಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ದರ್ಶನ್ ಫ್ಯಾನ್ಸ್ ನಟಿ ರಮ್ಯಾ ಅವರಿಗೆ ಅಸಭ್ಯವಾಗಿ ಮೆಸೇಜ್ ಮಾಡಿದ್ದು, ಈ ಹಿನ್ನಲೆಯಲ್ಲಿ ರಮ್ಯಾ ಪರವಾಗಿ ಹಲವು ಸೆಲೆಬ್ರಿಟಿಗಳು ಮಾತನಾಡುತ್ತಿದ್ದಾರೆ.

ಪ್ರಥಮ್, ಶಿವರಾಜ್​​ಕುಮಾರ್ , ವಿನಯ್ ರಾಜ್​ಕುಮಾರ್ ಮುಂತಾದವರು ರಮ್ಯಾಗೆ ಬೆಂಬಲ ನೀಡಿದ್ದಾರೆ. ಆದರೆ ಅಣ್ಣಾವ್ರ ಕುಟುಂಬದ ಸದಸ್ಯರ ಮಾತಿಗೆ ಯುವ ರಾಜ್​ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಅವರು ತಿರುಗೇಟು ನೀಡಿದ್ದಾರೆ. ಈ ಕುರಿತು ಅವರು ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಬಗ್ಗೆ ಶಿವರಾಜ್‌ಕುಮಾರ್ ಅವರ ತಮ್ಮ ರಾಘವೇಂದ್ರ ರಾಜ್‌ಕುಮಾರ್ ಅವರ ಮಗ ಯುವ ರಾಜ್‌ಕುಮಾರ್ ಅವರ ಪತ್ನಿ ಶ್ರೀದೇವಿ ಬೈರಪ್ಪ ಅವರು ಸಾಮಾಜಿಕ
ಜಾಲತಾಣದಲ್ಲಿ ದೊಡ್ಮನೆ ಕುಟುಂಬದ ನಡೆಯ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಯುವ ರಾಜ್‌ಕುಮಾರ್ ಅವರಿಂದ ನನಗೆ ಅನ್ಯಾಯ ಆಗಿದ್ದನ್ನು ಪ್ರಶ್ನೆ ಮಾಡಿದಾಗ ಯಾರೂ ನನ್ನ ಪರವಾಗಿ ನಿಲ್ಲಲಿಲ್ಲ. ನಮ್ಮ ಕುಟುಂಬದಲ್ಲಿಯೇ ಮಹಿಳೆಗೆ ಅನ್ಯಾಯ ಆಗುತ್ತಿದ್ದರೂ, ಯಾರೊಬ್ಬರೂ ಮಾತನಾಡಲಿಲ್ಲ. ಒಬ್ಬ ಮಹಿಳೆಯನ್ನು ಅವಮಾನ ಮಾಡುವಾಗ ಎಲ್ಲರೂ ಸುಮ್ಮನಿದ್ರಿ ಎಂದು ಆಕ್ರೋಶ ಹೊರಹಾಕಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಮಾಧ್ಯಮಗಳಲ್ಲಿ ಮಹಿಳೆಯನ್ನು ಅವಮಾನಿಸುವುದರ ವಿರುದ್ಧ ಮಾತನಾಡುವುದು ನೋಡುವಾಗ, ತಮ್ಮ ಕುಟುಂಬದಲ್ಲೇ ಇದೆಲ್ಲಾ ನಡೆಯುವಾಗ ಮಾತಾಡದೇ ಸುಮ್ಮನೆ ಇದ್ರಲ್ಲ. ಆವಾಗ ನಿದ್ದೆ ಮಾಡ್ತಾ ಇದ್ರಾ ಎಲ್ಲಾ?! ಎಂದು ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಈ ಪೋಸ್ಟ್‌ನ ಕೊನೆಯಲ್ಲಿ #Hypocrites #Drama ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದ್ದಾರೆ.

error: Content is protected !!