April 4, 2026
Saturday, April 4, 2026
spot_img

ಮಹಿಳಾ ಸುರಕ್ಷತೆಗಾಗಿ ‘ದೀದಿ’ ದಿಟ್ಟ ಹೆಜ್ಜೆ: ಬಂಗಾಳದಲ್ಲಿ ‘ಪಿಂಕ್ ಬೂತ್’, ‘ಶೈನಿಂಗ್’ ಮಹಿಳಾ ಗಸ್ತು ತಂಡ ರಚನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದ ಮಹಿಳೆಯರ ಸುರಕ್ಷತೆಯತ್ತ ಗಮನಹರಿಸಿದ್ದು, ಅದಕ್ಕಾಗಿ ಕೋಲ್ಕತ್ತಾ ಪೊಲೀಸ್‌ನ ಮೂಲಕ ಎರಡು ಹೊಸ ಉಪಕ್ರಮಗಳನ್ನು ಘೋಷಿಸಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿಯಿಂದ ಕೂಡಿದ ‘ಪಿಂಕ್ ಬೂತ್’ ಮತ್ತು ‘ಶೈನಿಂಗ್’ ಎಂಬ ಹೆಸರಿನ ಮಹಿಳಾ ಮೊಬೈಲ್ ಗಸ್ತು ತಂಡಗಳನ್ನು ಸ್ಥಾಪಿಸಿದ್ದಾರೆ.

ಈ ಕುರಿತು ಮಮತಾ ಬ್ಯಾನರ್ಜಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ‘ಪಿಂಕ್ ಬೂತ್‌ಗಳನ್ನು’ ಸ್ಥಾಪಿಸಲಾಗುತ್ತದೆ. ಸಂಜೆಯಿಂದ ಮಧ್ಯರಾತ್ರಿಯವರೆಗೆ ಕಾರ್ಯನಿರ್ವಹಿಸಲಿವೆ. ಮಹಿಳಾ ಪೊಲೀಸ್ ಸಿಬ್ಬಂದಿ ಮಹಿಳೆಯರಿಗೆ ನೇರವಾಗಿ ಸಹಾಯ ಮಾಡುತ್ತಾರೆ ಮತ್ತು ದೂರುಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.

‘ಶೈನಿಂಗ್’ ಎಂಬ ಹೆಸರಿನ ಮಹಿಳಾ ಮೊಬೈಲ್ ಗಸ್ತು ತಂಡಗಳನ್ನು ರಾತ್ರಿ 8 ಗಂಟೆಯಿoದ ಬೆಳಿಗ್ಗೆ 2 ಗಂಟೆಯವರೆಗೆ ನಿಯೋಜಿಸಲಾಗುತ್ತದೆ. ಈ ತಂಡಗಳು ಎಫ್‌ಜೆಎ ಬೈಪಾಸ್ ಮತ್ತು ನಗರದ ಪ್ರಮುಖ ರಸ್ತೆಗಳಲ್ಲಿ ಸುತ್ತಾಡಲಿವೆ. ಈ ಎರಡು ಹೊಸ ಉಪಕ್ರಮಗಳು ಮಹಿಳೆಯರ ಸುರಕ್ಷತಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ಅವರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !