January21, 2026
Wednesday, January 21, 2026
spot_img

ಡಿಜಿಟಲ್ ಬಂಧನ ಪ್ರಕರಣ: ಎಫ್‌ಐಆರ್ ಮಾಹಿತಿ ಸಲ್ಲಿಸುವಂತೆ ಎಲ್ಲಾ ರಾಜ್ಯಗಳಿಗೆ ಸುಪ್ರೀಂಕೋರ್ಟ್ ಖಡಕ್ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಿಜಿಟಲ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಲಾದ ಎಫ್‌ಐಆರ್ ಮಾಹಿತಿಯನ್ನು ಸಲ್ಲಿಸುವಂತೆ ಎಲ್ಲಾ ರಾಜ್ಯಗಳಿಗೆ ಸುಪ್ರೀಂಕೋರ್ಟ್ ನೋಟೀಸ್ ಜಾರಿ ಮಾಡಿದೆ. ಎಲ್ಲಾ ಪ್ರಕರಣಗಳ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ ಹಸ್ತಾಂತರಿಸುವ ಬಗ್ಗೆಯೂ ನ್ಯಾಯಾಲಯ ಚಿಂತನೆ ನಡೆಸಿದೆ.

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ದೇಶಾದಾದ್ಯಂತ ಎಲ್ಲಾ ಪ್ರಕರಣಗಳನ್ನು ನಿರ್ವಹಿಸಲು ತನ್ನ ಬಳಿ ಸಂಪನ್ಮೂಲಗಳಿವೆಯೇ ಎಂದು ಉತ್ತರಿಸುವಂತೆ ಸುಪ್ರೀಂಕೋರ್ಟ್ ಸಿಬಿಐಗೆ ಕೇಳಿದೆ. ಡಿಜಿಟಲ್ ಅರೆಸ್ಟ್ ಪ್ರಕರಣಗಳು ಮ್ಯಾನ್ಮಾರ್ ಹಾಗೂ ಥೈಲ್ಯಾಂಡ್‌ನಿಂದ ನಿರ್ವಹಿಸಲಾಗುತ್ತಿದೆ. ಹೀಗಾಗಿ ಎಲ್ಲಾ ರಾಜ್ಯಗಳಲ್ಲಿ ದಾಖಲಾಗಿರುವ ಇಂತಹ ವಂಚನೆ ಪ್ರಕರಣಗಳನ್ನು ಕೂಡಲೇ ಸಿಬಿಐಗೆ ಹಸ್ತಾಂತರಿಸಬೇಕು ಎಂದು ಸುಪ್ರೀಂಕೋರ್ಟ್ ರಾಜ್ಯಗಳಿಗೆ ತಿಳಿಸಿದೆ. ಪೊಲೀಸ್ ಇಲಾಖೆ ಅಲ್ಲದೆ ಹೊರಗಿನ ಸೈಬರ್ ತಜ್ಞರ ಅಗತ್ಯವಿದ್ದಲ್ಲಿ ತಿಳಿಸುವಂತೆಯೂ ನ್ಯಾಯಾಲಯ ಹೇಳಿದೆ.

Must Read