Saturday, November 22, 2025

‘ಕಾಮನ್‌ ಮ್ಯಾನ್‌’ ಆಗಿ ಬಸವನಗುಡಿಯಲ್ಲಿ ಡಿಂಪಲ್ ಕ್ವೀನ್‌ನ ಬಿಗ್ ಅಡ್ವೆಂಚರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೆಲೆಬ್ರಿಟಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾನ್ಯರಂತೆ ಬೆರೆಯುವುದು ಸವಾಲಿನ ಕೆಲಸ. ತಮಗೆ ಬೇಕಾದಂತೆ ನಿರ್ಬಂಧವಿಲ್ಲದೆ ಹೊರಗೆ ಸುತ್ತಾಡಬೇಕೆಂಬ ಆಸೆ ಬಂದಾಗ ಕೆಲವು ತಾರೆಯರು ಮುಖ ಮುಚ್ಚಿಕೊಂಡು ಜನಸಂದಣಿಯಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಇದೀಗ ಇದೇ ಹಾದಿ ತುಳಿದಿದ್ದಾರೆ ಕನ್ನಡದ ‘ಡಿಂಪಲ್ ಕ್ವೀನ್’ ರಚಿತಾ ರಾಮ್.

ಬೆಂಗಳೂರಿನ ಐತಿಹಾಸಿಕ ಬಸವನಗುಡಿ ಕಡಲೇಕಾಯಿ ಪರಿಷೆಗೆ ಭೇಟಿ ನೀಡಿದ ರಚಿತಾ ರಾಮ್, ತಮ್ಮ ಗುರುತನ್ನು ಮರೆಮಾಚಲು ಸಿಂಹದ ಮುಖವಾಡದ ಮಾಸ್ಕ್ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಯಾವುದೇ ತಾರಾ ಆಡಂಬರವಿಲ್ಲದೆ, ಅವರು ಮುಕ್ತವಾಗಿ ಪರಿಷೆಯ ವಾತಾವರಣವನ್ನು ಆನಂದಿಸಿದರು.

ಪರಿಷೆ ಸುತ್ತಾಟದ ಕುರಿತು ಮಾತನಾಡಿರುವ ರಚ್ಚು, ಇದು ತಮಗೆ ಒಂದು ‘ಅದ್ಭುತ ಅನುಭವ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇದರಲ್ಲಿ ವಿಶೇಷವೆಂದರೆ, ಅಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಜನರ ಗುಂಪಿನಲ್ಲಿ ಸ್ವತಃ ನಿಂತು, ಅವರೇ ಮುಖವಾಡದೊಂದಿಗೆ ಪೋಸ್ ನೀಡಿದ್ದಾರೆ! ಆದರೆ, ಪಕ್ಕದಲ್ಲಿದ್ದ ಯಾರಿಗೂ ಆ ಮುಖವಾಡದ ಹಿಂದೆ ಇರುವುದು ಡಿಂಪಲ್ ಕ್ವೀನ್ ರಚಿತಾ ರಾಮ್ ಎಂದು ಗುರುತಿಸಲು ಸಾಧ್ಯವಾಗಿಲ್ಲ. ಈ ಕುರಿತು ಅವರು ಖುಷಿ ಪಟ್ಟಿದ್ದಾರೆ.

ಬಳಿಕ ವೀಡಿಯೋ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿರುವ ನಟಿ, “ನನ್ನ ಜೊತೆ ಸೆಲ್ಫಿ ತೆಗೆದುಕೊಂಡವರು ನನಗೆ ಟ್ಯಾಗ್ ಮಾಡಿ” ಎಂದು ಹೇಳುವ ಮೂಲಕ ಕಡಲೇಕಾಯಿ ಪರಿಷೆಯ ರೋಚಕ ರಹಸ್ಯವನ್ನು ಬಯಲು ಮಾಡಿದ್ದಾರೆ.

error: Content is protected !!