ಹೊಸದಿಗಂತ ವರದಿ,ಗದಗ:
ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಉತ್ಖನನದ ನಿರ್ದೇಶಕ ಡಾ.ಟಿ.ಎಂ. ಕೇಶವ್ (೭೭) ಅವರು ಶುಕ್ರವಾರ ನಿಧನರಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ಪುರಾತತ್ವ ಇಲಾಖೆ ನಿವೃತ್ತ ಅಽಕಾರಿ ಹಾಗೂ ಲಕ್ಕುಂಡಿಯ ಉತ್ಖನನದ ನಿರ್ದೇಶಕರಾಗಿದ್ದ ಕೇಶವ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಅವರು ನಿವೃತ್ತ ಅಧಿಕಾರಿ ಸಾವಿನ ಬಗ್ಗೆ ಖಚಿತ ಪಡಿಸಿದರು.
ಡಾ.ಟಿ.ಎಂ. ಕೇಶವ್ ನೇತೃತ್ವದಲ್ಲಿ ನಡೆಯುತ್ತಿದ್ದ ಲಕ್ಕುಂಡಿ ಉತ್ಖನನ ಕಾರ್ಯಕ್ಕೆ ಅವರ ನಿರ್ದೇಶನವಿತ್ತು. ಡಾ.ಟಿ.ಎಂ. ಕೇಶವ್ ಹಾಗೂ ಶೇಜೇಶ್ವರ ಹೆಸರಲ್ಲಿ ಉತ್ಖನನ ಪರವಾನಿಗೆ ಪಡೆಯಲಾಗಿತ್ತು.
ಕೇಂದ್ರ ಪುರಾತತ್ವ ಇಲಾಖೆ ಅಧೀಕ್ಷಕರಾಗಿ ನಿವೃತ್ತರಾಗಿದ್ದ ಡಾ.ಟಿ.ಎಂ ಕೇಶವ್.
ಅವರ ಅಗಲುವಿಕೆ ದೊಡ್ಡ ನೋವು ತಂದಿದ್ದು, ಜ.೩೧ರಂದು ಉತ್ಖನನ ಸ್ಥಳದಲ್ಲಿ ಶ್ರದ್ಧಾಂಜಲಿ ಸಲ್ಲಿಸುವುದಾಗಿ ಶರಣು ಗೋಗೇರಿ ತಿಳಿಸಿದ್ದಾರೆ.



