ಹೊಸದಿಗಂತ ವರದಿ ಸುಳ್ಯ:
ಸುಳ್ಯ ಪಟ್ಟಣ ಪಂಚಾಯತ್ ವ್ಯಾಪ್ತಿಯ ತ್ಯಾಜ್ಯವು ಶೆಡ್ ನಿಂದ ತೆರವು ನಡೆದಿದ್ದು ಇದೀಗ ಕಲ್ಚರ್ಪೆಯ ತ್ಯಾಜ್ಯ ಘಟಕದಲ್ಲಿ ಬರ್ನಿಂಗ್ ಕಾರ್ಯ ನಡೆಯದೇ ತ್ಯಾಜ್ಯ ತುಂಬಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದ ಪಟ್ಟಣ ಪಂಚಾಯತ್ ಮುಂಭಾಗದಲ್ಲಿ ತುರ್ತು ಪ್ರತಿಭಟನೆ ಕುಳಿತ ಘಟನೆ ಶುಕ್ರವಾರ ವರದಿಯಾಗಿದೆ.

ಕಲ್ಚರ್ಪೆ ಘನ ತ್ಯಾಜ್ಯ ಘಟಕದಲ್ಲಿ ತ್ಯಾಜ್ಯ ಬರ್ನಿಂಗ್ ಕಾರ್ಯಗಳು ನಡೆಯಬೇಕಿದ್ದು ಅಲ್ಲಿ ಕೇವಲ ಪ್ಲಾಸ್ಟಿಕ್ ಗಳನ್ನು ಮಾತ್ರ ಉರಿಸುತ್ತಿದ್ದು ಅದು ಪ್ರಕೃತಿಯನ್ನು ಹಾಳುಗೆಡವುದಲ್ಲದೇ ಸ್ಥಳೀಯ ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದು ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಮತ್ತು ಆಡಳಿತ ಸ್ಪಂದನೆ ನೀಡಬೇಕು ಎಂದು ಆಗ್ರಹಿಸಿ ಪಟ್ಟಣ ಪಂಚಾಯತ್ ಮುಂಭಾಗದಲ್ಲಿ ಧರಣಿ ಕುಳಿತಿದ್ದು ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಆಗ್ರಹಿಸಿದರು.
ಮೌನ ಪ್ರತಿಭಟನಾ ಸಭೆಯಲ್ಲಿ ಪ್ರಮುಖರಾದ ಅಶೋಕ , ಬಾಲಚಂದ್ರ ಕಲ್ಚರ್ಪೆ , ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸುದೇಶ್ ಅರಂಬೂರು , ಅಶೋಕ್ ಪೀಚೆ , ನಾರಾಯಣ ಜಬಳೆ ಕಲ್ಚರ್ಪೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದಾರೆ.
