ಹೊಸ ದಿಗಂತ ಡಿಜಿಟಲ್ ಡೆಸ್ಕ್:
2026 ರ ತಮಿಳುನಾಡು ಚುನಾವಣೆ ‘ಶುದ್ಧ ಶಕ್ತಿ’ ಟಿವಿಕೆ ಮತ್ತು ‘ದುಷ್ಟ ಶಕ್ತಿ’ ಡಿಎಂಕೆ ನಡುವಿನ ಸ್ಪರ್ಧೆ ಎಂದು ನಟ, ರಾಜಕಾರಣಿ ವಿಜಯ್ ಕರೆದಿದ್ದಾರೆ.
ಕರೂರು ದುರಂತದ ನಂತರ ತಮಿಳುನಾಡಿನಲ್ಲಿ ನಡೆಸಿದ ಮೊದಲ ಸಾರ್ವಜನಿಕ ಸಭೆಯಲ್ಲಿ ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ‘ಶುದ್ಧ ಶಕ್ತಿ’ಯಾಗಿದೆ. ಈಗ ಸ್ಪಷ್ಟವಾಗಿ 2026ರ ಚುನಾವಣಾ ಹೋರಾಟ, ಈ ಇಬ್ಬರ ನಡುವೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದರು.
ದಿವಂಗತ ಮುಖ್ಯಮಂತ್ರಿಗಳಾದ ಎಂಜಿಆರ್ ಮತ್ತು ಜಯಲಲಿತಾ ಅವರನ್ನು ಉಲ್ಲೇಖಿಸಿ, ಅವರು ಡಿಎಂಕೆಯನ್ನು ‘ಥೀಯ ಶಕ್ತಿ’ (ದುಷ್ಟ ಶಕ್ತಿ) ಎಂದು ಆಗಾಗ್ಗೆ ಬಣ್ಣಿಸುತ್ತಿದ್ದರು. ಟಿವಿಕೆ ‘ಥೂಯ ಶಕ್ತಿ’ (ಶುದ್ಧ ಶಕ್ತಿ) ಆಗಿದೆ. ಈಗ ಸ್ಪರ್ಧೆಯು ಥೂಯ ಶಕ್ತಿ ಟಿವಿಕೆ ಮತ್ತು ಥೀಯ ಶಕ್ತಿ ಡಿಎಂಕೆ ನಡುವೆ ಇದೆ’ ಎಂದು ಅವರು 2026ರ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿ ಹೇಳಿದರು.
‘ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿವೆ ಎಂದು ಆರೋಪಿಸಿದ ಅವರು, ದಿವಂಗತ ಮುಖ್ಯಮಂತ್ರಿಗಳಾದ ಸಿ.ಎನ್. ಅಣ್ಣಾದೊರೈ ಮತ್ತು ಎಂಜಿಆರ್ ಎಲ್ಲರಿಗೂ ಸ್ಫೂರ್ತಿಯಾಗಿದ್ದರು, ಅವರು ಯಾರ ವೈಯಕ್ತಿಕ ಆಸ್ತಿಯೂ ಅಲ್ಲ. ಅವರನ್ನು ಉಲ್ಲೇಖಿಸಿದ್ದಕ್ಕಾಗಿ ಯಾರೂ ನನ್ನ ವಿರುದ್ಧ ದೂರು ನೀಡಲು ಸಾಧ್ಯವಿಲ್ಲ’ ಎಂದು ಅವರು ಪ್ರತಿಪಾದಿಸಿದರು.
ಕಾನೂನು ಸುವ್ಯವಸ್ಥೆ ಮತ್ತು ಕೃಷಿ ಸೇರಿದಂತೆ ಹಲವು ವಿಷಯಗಳಲ್ಲಿ ಡಿಎಂಕೆ ಸರ್ಕಾರವನ್ನು ಟೀಕಿಸಿದರು.
ಇತ್ತೀಚೆಗೆ ಟಿವಿಕೆ ಸೇರಿದ ಸ್ಥಳೀಯ ಪ್ರಬಲ ವ್ಯಕ್ತಿ, ಎಐಎಡಿಎಂಕೆಯ ಮಾಜಿ ಹಿರಿಯ ಕೆಎ ಸೆಂಗೊಟ್ಟೈಯನ್ ಅವರಂತೆ, ಇನ್ನಷ್ಟು ನಾಯಕರು ಪಕ್ಷಕ್ಕೆ ಬರಲಿದ್ದಾರೆ ಮತ್ತು ಅವರಿಗೆ ಸೂಕ್ತ ಮನ್ನಣೆ ನೀಡಲಾಗುವುದು ಎಂದು ವಿಜಯ್ ಹೇಳಿದರು.

