January17, 2026
Saturday, January 17, 2026
spot_img

ಯಾವುದೇ ಕಾರಣಕ್ಕೂ ರಷ್ಯಾದ ಮಿಲಿಟರಿಗೆ ಸೇರಬೇಡಿ: ಭಾರತೀಯ ಪ್ರಜೆಗಳಿಗೆ ಕೇಂದ್ರ ಸರಕಾರ ಸೂಚನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಾವುದೇ ಅವಕಾಶಕ್ಕೂ ರಷ್ಯಾ ಸೇನೆ ಸೇರುವ ಭಾರತೀಯರು ಮುಂದಾಗಬಾರದು ಎಂದು ಭಾರತ ಸರಕಾರ ಸೂಚನೆ ನೀಡಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ವಿದೇಶಾಂಗ ಸಚಿವಾಲಯ, ರಷ್ಯಾದ ಶಸ್ತ್ರಸಜ್ಜಿತ ಸೇನೆಯಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಭಾರತೀಯರನ್ನು ಬಿಡುಗಡೆ ಮಾಡುವಂತೆ ಕೋರಿದೆ. ರಷ್ಯಾ ಸೇನೆಗೆ ಭಾರತೀಯರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂಬ ಹೊಸ ವರದಿ ಬಂದಿದ್ದು, ಈ ಬೆನ್ನಲ್ಲೇ ಈ ಹೇಳಿಕೆ ಬಿಡುಗಡೆಯಾಗಿದೆ.

ರಷ್ಯಾದ ಮಿಲಿಟರಿ ಅಂತರ್ಗತವಾಗಿರುವ ಬೆದರಿಕೆ ಮತ್ತು ಅಪಾಯಗಳನ್ನು ಹೊಂದಿದ್ದು, ಸುರಕ್ಷತೆಯ ದೃಷ್ಟಿಯಿಂದ ಭಾರತೀಯ ಪ್ರಜೆಗಳಿಗೆ ರಷ್ಯಾದ ಮಿಲಿಟರಿ ಸೇರಲು ನೀಡುವ ಯಾವುದೇ ಆಫರ್​ಗಳನ್ನು ಸ್ವೀಕರಿಸದಂತೆಯೂ ತಿಳಿಸಿದೆ.

ಈ ಕುರಿತು ವಿದೇಶಾಂಗ ಸಚಿವಾಲಯದ ವಕ್ತಾರ ರಂಧೀರ್​​ ಜೈಸ್ವಾಲ್​ ಅವರು ಮಾತನಾಡಿ, ಇತ್ತೀಚಿಗೆ ರಷ್ಯಾದ ಸೇನೆಗೆ ಭಾರತೀಯರನ್ನು ನೇಮಕಾತಿ ಮಾಡಿಕೊಳ್ಳುತ್ತಿರುವ ಬಗ್ಗೆ ನಾವು ವರದಿಗಳನ್ನು ಗಮನಿಸಿದ್ದೇವೆ. ಕಳೆದೊಂದು ವರ್ಷದಿಂದಲೂ ರಷ್ಯಾಗೆ ಸೇರುವ ಅಪಾಯದ ಕುರಿತು ಭಾರತ ಅನೇಕ ಬಾರಿ ಹೇಳಿದೆ. ಆ ಸೇನೆ ಸೇರುವ ಕೋರ್ಸ್​ಗಳ ಬಗ್ಗೆ ಭಾರತೀಯ ಪ್ರಜೆಗಳು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ.

ಈ ಕುರಿತಾಗಿ ರಷ್ಯಾ ಅಧಿಕಾರಿಗಳೊಂದಿಗೂ ಕೂಡ ಮಾತನಾಡಿದ್ದೇವೆ. ದೆಹಲಿ ಮತ್ತು ಮಾಸ್ಕೋದಲ್ಲಿ ಅಧಿಕಾರಿಗಳು ಪ್ರಸ್ತಾಪಿಸಿದ್ದು, ಭಾರತೀಯರ ನೇಮಕಾತಿ ಅಭ್ಯಾಸವನ್ನು ನಿಲ್ಲಿಸಿ, ಅವರನ್ನು ಬಿಡುಗಡೆ ಮಾಡುವಂತೆ ಕೋರಿದ್ದೇವೆ. ಪರಿಣಾಮಕ್ಕೆ ಒಳಗಾದ ಭಾರತೀಯ ನಾಗರಿಕ ಕುಟುಂಬದವರೊಂದಿಗೂ ನಾವು ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

ರಷ್ಯಾ ಸೇನಾ ಘಟಕದಲ್ಲಿ ಬಾಣಸಿಗ, ಬೆಂಬಲ ಸಿಬ್ಬಂದಿಯಾಗಿ ಅನೇಕ ಭಾರತೀಯರು ಕಾರ್ಯ ನಿರ್ವಹಿಸುವುದನ್ನು ಭಾರತ ಪದೇ ಪದೇ ಪ್ರಶ್ನಿಸುತ್ತಿದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ರಷ್ಯಾ ಭೇಟಿ ಸಂದರ್ಭದಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿದ್ದರು.

ರಷ್ಯಾದ ಸೇನೆ ಸೇರಿಕೊಂಡವರ ಪೈಕಿ 85 ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ 20 ಮಂದಿಯನ್ನು ಬಿಡಿಸಿಕೊಂಡು ಬರುವ ಪ್ರಯತ್ನ ಸಾಗಿದೆ. ಈ ಕುರಿತು ಕಳೆದ ವರ್ಷದ ಅಕ್ಟೋಬರ್​ನಲ್ಲಿ ಕೇಂದ್ರ ಸರ್ಕಾರ ತಿಳಿಸಿತ್ತು.

Must Read

error: Content is protected !!