ಕಿವಿ ಸ್ವಚ್ಛಗೊಳಿಸುವುದನ್ನು ಹಲವರು ದಿನನಿತ್ಯದ ಅಭ್ಯಾಸವನ್ನೇ ಮಾಡಿಕೊಂಡಿದ್ದಾರೆ. ವಿಶೇಷವಾಗಿ ಕಾಟನ್ ಸ್ಟಿಕ್ ಕಿವಿಯೊಳಗೆ ಹಾಕದೆ ಶಾಂತಿ ಇಲ್ಲ ಎಂದುಕೊಳ್ಳುವವರೂ ಇದ್ದಾರೆ. ಆದರೆ ವೈದ್ಯಕೀಯವಾಗಿ ನೋಡುವುದಾದರೆ, ಈ ‘ಕ್ಲೀನ್’ ಅಭ್ಯಾಸವೆನ್ನಲಾಗುವ ಕೆಲಸವೇ ಕಿವಿಗೆ ಗಂಭೀರ ಹಾನಿ ತರುವ ಸಾಧ್ಯತೆ ಹೆಚ್ಚು. ಕಿವಿಯಲ್ಲಿ ಮೇಣ ಇರುವುದೇ ನಮ್ಮ ದೇಹದ ರಕ್ಷಣಾ ವ್ಯವಸ್ಥೆಯ ಭಾಗ; ಅದನ್ನು ಬಲವಂತವಾಗಿ ತೆಗೆದುಹಾಕಲು ಯತ್ನಿಸಿದರೆ ಸಮಸ್ಯೆಗಳು ಹೆಚ್ಚಾಗುತ್ತವೆ ಎಂದು ತಜ್ಞರು ಎಚ್ಚರಿಸುತ್ತಾರೆ.
ಕಾಟನ್ ಸ್ಟಿಕ್ ಅಥವಾ ಇಯರ್ ಬಡ್ ಕಿವಿಯನ್ನು ಸ್ವಚ್ಛ ಮಾಡುವುದಕ್ಕಿಂತ ಮೇಣವನ್ನು ಇನ್ನೂ ಒಳಕ್ಕೆ ತಳ್ಳುವ ಕೆಲಸ ಹೆಚ್ಚು ಮಾಡುತ್ತದೆ. ಹೆಚ್ಚಿನವರು ಕಾಟನ್ ಸ್ಟಿಕ್ ಅನ್ನು ‘ಕಿವಿ ಕ್ಲೀನರ್’ ಎಂದುಕೊಳ್ಳುವುದೇ ದೊಡ್ಡ ತಪ್ಪು. ಕಾಟನ್ ಸ್ಟಿಕ್ ಪ್ಯಾಕೆಟ್ ಮೇಲೆಯೇ “ಕಿವಿಯೊಳಗೆ ಹಾಕಬೇಡಿ” ಎಂದು ಬರೆದಿದ್ದರೂ, ಬಳಕೆದಾರರ ಅದನ್ನು ಓದುವುದೇ ಇಲ್ಲ.
ಇಯರ್ ಬಡ್ ಕಿವಿಯೊಳಗೆ ಹಾಕೋದ್ರಿಂದ ಏನೆಲ್ಲಾ ಹಾನಿ ಇದೆ?:
- ಮೇಣ ಕಿವಿಯ ಒಳ ಕವಾಟಕ್ಕೆ ತಳ್ಳಲ್ಪಟ್ಟು ಒಳಗಿನ ಕಾಲುವೆ ಬಂದ್ ಆಗುವ ಸಾಧ್ಯತೆ ಇದೆ
- ಕಿವಿಯ ಸೂಕ್ಷ್ಮ ಚರ್ಮಕ್ಕೆ ಗಾಯ, ರಂಧ್ರ ದೊಡ್ಡದಾಗುವ ಅಪಾಯ
- ಬ್ಯಾಕ್ಟೀರಿಯಾ ಪ್ರವೇಶಿಸಿ ಸೋಂಕು, ನೋವು, ಊತ ಉಂಟಾಗುವುದು
- ಶ್ರವಣಶಕ್ತಿ ಕುಗ್ಗುವ ಸಂಭವ ಹೆಚ್ಚು
- 70% ಕಿವಿ ಗಾಯಗಳು ಇಯರ್‌ಬಡ್ ಬಳಕೆಯಿಂದಲೇ ಉಂಟಾಗುತ್ತವೆ ಎಂಬ ಅಧ್ಯಯನದ ವರದಿ
ವೈದ್ಯರ ಪ್ರಕಾರ, ಕಿವಿಯಲ್ಲಿರುವ ಮೇಣ ತಾನಾಗಿಯೇ ಹೊರಗೆ ಬರಲು ಶುರುವಾಗುತ್ತದೆ; ಆ ವೇಳೆ ಹೊರಗಿನ ಭಾಗದಲ್ಲಿರುವುದನ್ನು ಮಾತ್ರ ಮೃದುವಾಗಿ ತೊಳೆದುಹಾಕುವುದು ಸುರಕ್ಷಿತ. ಅನಗತ್ಯವಾಗಿ ಕಿವಿಯೊಳಗೆ ಸಾಧನ ಹಾಕುವುದು ದೀರ್ಘಕಾಲಿಕ ಹಾನಿಗೆ ಕಾರಣವಾಗಬಹುದು.
ಕಿವಿ ಆರೋಗ್ಯಕ್ಕಾಗಿ, ‘ಕಾಟನ್ ಸ್ಟಿಕ್ ಕ್ಲೀನಿಂಗ್’ ಅಭ್ಯಾಸವನ್ನು ಬಿಟ್ಟು ಸುರಕ್ಷಿತ ವಿಧಾನಗಳಿಗೆ ಮುನ್ನಡೆಯುವುದು ಅತ್ಯಾವಶ್ಯಕ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

