ಇತ್ತೀಚಿಗೆ ಎಲ್ಲರ ಮನೆಗಳಲ್ಲಿ ಸ್ಮಾರ್ಟ್ ಟಿವಿ ಸಾಮಾನ್ಯವಾಗಿಬಿಟ್ಟಿದೆ. ಆದರೆ ಬಹಳಷ್ಟು ಜನರು ಅದನ್ನು ಸಿನಿಮಾ, ಸೀರಿಯಲ್ ಅಥವಾ ವೆಬ್ ಸೀರಿಸ್ ನೋಡುವ ಸಾಧನ ಎಂದು ಮಾತ್ರ ಭಾವಿಸುತ್ತಾರೆ. ವಾಸ್ತವವಾಗಿ, ಸ್ಮಾರ್ಟ್ ಟಿವಿ ಒಂದು ದೊಡ್ಡ ಪರದೆ ಹೊಂದಿರುವ ಮಿನಿ ಕಂಪ್ಯೂಟರ್‌ನಂತೆ ಕೆಲಸ ಮಾಡಬಲ್ಲದು ಅನ್ನೋದು ಗೊತ್ತಿರೋದಿಲ್ಲ. ವಿಶೇಷವಾಗಿ ಅದರ HDMI ಪೋರ್ಟ್ ಬಳಸಿದರೆ, ಟಿವಿಯ ಬಳಕೆ ಹಲವು ಪಟ್ಟು ಹೆಚ್ಚುತ್ತದೆ.
HDMI ಪೋರ್ಟ್ ಎಂದರೆ ಕೇವಲ ಕೇಬಲ್ ಹಾಕುವ ಜಾಗವಲ್ಲ. ಇದು ವಿವಿಧ ಸಾಧನಗಳನ್ನು ಒಂದೇ ಪರದೆಯೊಂದಿಗೆ ಸಂಪರ್ಕಿಸುವ ಸೇತುವೆಯಂತೆ ಕೆಲಸ ಮಾಡುತ್ತದೆ. ಉದಾಹರಣೆಗೆ, ಗೇಮ್ ಕನ್ಸೋಲ್ ಅನ್ನು ಟಿವಿಗೆ ಜೋಡಿಸಿದರೆ ಮನೆಯಲ್ಲೇ ದೊಡ್ಡ ಪರದೆಯಲ್ಲಿ ಗೇಮಿಂಗ್ ಅನುಭವಿಸಬಹುದು. ಸಣ್ಣ ಮೊಬೈಲ್ ಪರದೆಗೆ ಸೀಮಿತವಾಗಿದ್ದ ಆಟಗಳು ಟಿವಿಯಲ್ಲಿ ತುಂಬಾ ರೋಚಕವಾಗಿ ಕಾಣಿಸುತ್ತವೆ.
ಲ್ಯಾಪ್‌ಟಾಪ್ ಅನ್ನು HDMI ಮೂಲಕ ಸಂಪರ್ಕಿಸಿದರೆ, ಟಿವಿ ದೊಡ್ಡ ಡಿಸ್ಪ್ಲೇ ಆಗಿ ಕೆಲಸ ಮಾಡುತ್ತದೆ. ಪ್ರೆಸೆಂಟೇಶನ್, ಸಿನಿಮಾ ವೀಕ್ಷಣೆ ಅಥವಾ ಕೆಲಸ ಮಾಡುವಾಗ ಇದು ತುಂಬಾ ಉಪಯುಕ್ತ. ಸ್ಮಾರ್ಟ್‌ಫೋನ್‌ನಲ್ಲಿರುವ ಫೋಟೋ, ವಿಡಿಯೋ ಅಥವಾ ಬೇರೆ ಕಂಟೆಂಟ್ ಕೂಡ ದೊಡ್ಡ ಪರದೆಯಲ್ಲಿ ಸುಲಭವಾಗಿ ನೋಡಬಹುದು.
ಇದನ್ನೂ ಓದಿ:
ಇದೇ ರೀತಿ, ಸೌಂಡ್‌ಬಾರ್ ಅನ್ನು HDMI ARC ಮೂಲಕ ಕನೆಕ್ಟ್ ಮಾಡಿದರೆ, ಕಡಿಮೆ ವೈರ್‌ಗಳಲ್ಲಿ ಉತ್ತಮ ಧ್ವನಿ ಗುಣಮಟ್ಟ ಪಡೆಯಬಹುದು. ಮನೆಗೆ ಥಿಯೇಟರ್‌ನಂತಹ ಅನುಭವ ಸಿಗುತ್ತದೆ. ಸ್ಟ್ರೀಮಿಂಗ್ ಡಿವೈಸ್‌ಗಳನ್ನು ಕೂಡ ಈ ಪೋರ್ಟ್ ಮೂಲಕ ಜೋಡಿಸಿ ಹಳೆಯ ಟಿವಿಯನ್ನೇ ಹೊಸದಾಗಿ ಬಳಸಬಹುದು.
ಇನ್ನೊಂದು ಕುತೂಹಲಕರ ಬಳಕೆ ಎಂದರೆ CCTV ಕ್ಯಾಮೆರಾಗಳನ್ನು ಸಂಪರ್ಕಿಸುವುದು. ಇದರಿಂದ ಮನೆಯ ಭದ್ರತೆಯನ್ನು ದೊಡ್ಡ ಪರದೆಯಲ್ಲಿ ನೇರವಾಗಿ ಗಮನಿಸಬಹುದು. ಅಂದರೆ, ಸ್ಮಾರ್ಟ್ ಟಿವಿ ಕೇವಲ ಮನರಂಜನೆಗೆ ಮಾತ್ರವಲ್ಲ, ದಿನನಿತ್ಯದ ಹಲವಾರು ಅಗತ್ಯಗಳಿಗೆ ಸಹ ಉಪಯುಕ್ತವಾಗುವ ಬುದ್ಧಿವಂತ ಸಾಧನವಾಗಿದೆ.



