Thursday, December 4, 2025

Travel | ಭಯಕ್ಕೆ ಸವಾಲು ಹಾಕುವ ಸಾಹಸ ನಿಮ್ಮಲ್ಲಿದ್ಯಾ ? ಭಾರತದಲ್ಲೇ ಬೆಸ್ಟ್ ಬಂಜಿ ಜಂಪಿಂಗ್ ತಾಣಗಳು ಇಲ್ಲಿದೆ ನೋಡಿ

ಸಾಹಸ ಪ್ರಿಯರಿಗೆ ಬಂಜಿ ಜಂಪಿಂಗ್‌ಗಿಂತ ವಿಶಿಷ್ಟವಾದುದೇ ಇಲ್ಲ. ಎತ್ತರದಿಂದ ಕೆಳಗೆ ಜಿಗಿದು ಗಾಳಿಯಲ್ಲಿ ತೇಲುತ್ತಾ ಜೀವಂತಿಕೆಯ ಸೊಗಸನ್ನು ಅನುಭವಿಸುವ ಆ ಕ್ಷಣ ಜೀವನಪೂರ್ತಿ ಸ್ಮರಣೀಯವಾಗುತ್ತದೆ. ಭಾರತದಲ್ಲಿಯೇ ಇಂತಹ ರೋಮಾಂಚಕಾರಿ ಬಂಜಿ ಜಂಪಿಂಗ್ ಅನುಭವಕ್ಕೆ ಪ್ರಸಿದ್ಧವಾದ ಕೆಲವು ತಾಣಗಳು ವಿದೇಶಕ್ಕೆ ಹೋಗಬೇಕೆಂಬ ಆಸೆಯನ್ನು ಮರೆಸುವಷ್ಟು ಜನಪ್ರಿಯವಾಗಿವೆ.

  • ರಿಷಿಕೇಶ, ಉತ್ತರಾಖಂಡ: ಗಂಗಾ ನದಿಯ ದಡದಲ್ಲಿ ನಿಂತ ಬೆಟ್ಟಗಳ ನಡುವೆ 83 ಮೀಟರ್ ಎತ್ತರದಿಂದ ನಡೆಯುವ ಜಿಗಿತವೇ ಇಲ್ಲಿನ ವಿಶೇಷತೆ. ವಿದೇಶಿ ಮಾನದಂಡಗಳ ಸುರಕ್ಷತೆಯೊಂದಿಗೆ ಇದು ಭಾರತದ ನಂಬರ್ ಒನ್ ಬಂಜಿ ತಾಣವಾಗಿದೆ.
  • ಲೋನವಲಾ, ಮಹಾರಾಷ್ಟ್ರ: ಮುಂಬೈನ ಸಮೀಪದಲ್ಲಿರುವ ಈ ಹಸಿರು ಬೆಟ್ಟ ಪ್ರದೇಶದಲ್ಲಿ ಪ್ರಕೃತಿಯ ನಡುವೆ ಬಂಜಿ ಜಿಗಿತಕ್ಕೆ ಸುವರ್ಣಾವಕಾಶ.
  • ಗೋವಾ: ಕಡಲತೀರದ ಮಸ್ತಿಯ ನಡುವೆ ಬಂಜಿ ಜಂಪಿಂಗ್ ಅನುಭವಿಸುವ ಅವಕಾಶ ಗೋವಾದ ಮತ್ತೊಂದು ಆಕರ್ಷಣೆ.
  • ಜಗದಲ್‌ಪುರ, ಛತ್ತೀಸ್‌ಗಢ: ಚಿತ್ತಾಕೋಟೆ ಜಲಪಾತದ ಬಳಿ ನಡೆಯುವ ಬಂಜಿ ಜಂಪಿಂಗ್ ಈಗ ಹೊಸ ಪ್ರವಾಸಿ ಆಕರ್ಷಣೆಯಾಗಿದೆ.

ಬಂಜಿ ಜಂಪಿಂಗ್ ಮಾಡುವ ಮುನ್ನ ಆರೋಗ್ಯ ತಪಾಸಣೆ, ಸುರಕ್ಷತಾ ನಿಯಮಗಳ ಪಾಲನೆ ಅತ್ಯಂತ ಅಗತ್ಯ. ಧೈರ್ಯ, ಉತ್ಸಾಹ ಮತ್ತು ಜವಾಬ್ದಾರಿಯೊಂದಿಗೆ ಮಾಡಿದ ಸಾಹಸವೇ ನಿಜವಾದ ಜೀವನದ ಅವಿಸ್ಮರಣಿಕ ಕ್ಷಣ.

error: Content is protected !!