ಪಿಝಾದಲ್ಲಿರುವ ಸಂಸ್ಕರಿಸಿದ ಹಿಟ್ಟಿನಿಂದ ಬರುವ ಕಾರ್ಬೋಹೈಡ್ರೇಟ್‌ಗಳು ಮತ್ತು ಚೀಸ್‌ನಿಂದ ಬರುವ ಸ್ಯಾಚುರೇಟೆಡ್ ಕೊಬ್ಬುಗಳು ದೇಹದ ತೂಕ ಹೆಚ್ಚಾಗಲು ಕಾರಣವಾಗುತ್ತವೆ.
ಪಿಝಾದ ಒಂದು ವಿಶಿಷ್ಟ ಸ್ಲೈಸ್ 300-400 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಇದನ್ನು ಆಗಾಗ್ಗೆ ತಿನ್ನುವುದರಿಂದ ದೇಹದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ ಜೊತೆಗೆ ಬೊಜ್ಜು ಉಂಟಾಗುತ್ತದೆ. ಇದು ಮಧುಮೇಹ ಮತ್ತು ಹೃದಯ ಕಾಯಿಲೆಗೆ ಕಾರಣವಾಗಬಹುದು.
ಪಿಝಾದಲ್ಲಿರುವ ಹೆಚ್ಚಿನ ಸೋಡಿಯಂ ಅಂಶವು ದೇಹದ ರಕ್ತದೊತ್ತಡವನ್ನು ಹೆಚ್ಚಿಸಬಹುದು. ಒಂದು ಪಿಝಾ ಸ್ಲೈಸ್‌ನಲ್ಲಿ ಸುಮಾರು 600-900 ಮಿಲಿಗ್ರಾಂ ಸೋಡಿಯಂ ಒಳಗೊಂಡಿರುತ್ತದೆ, ನಿತ್ಯ ಪಿಜ್ಜಾ ತಿನ್ನುವುದರಿಂದ ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಚೀಸ್ ಮತ್ತು ಸಂಸ್ಕರಿಸಿದ ಮಾಂಸದಂತಹ ಟಾಪಿಂಗ್‌ಗಳು.
ಪಿಝಾ ತಿನ್ನುವುದು ಒಂಥರ ಹೃದಯದ ಸಂಬಂಧಿ ಕಾಯಿಲೆಗಳಿಗೆ ಆಹ್ವಾನ ನೀಡಿದಂತೆ. ಸ್ಯಾಚುರೇಟೆಡ್ ಕೊಬ್ಬುಗಳು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ ಮತ್ತು ಅಪಧಮನಿಗಳನ್ನು ಮುಚ್ಚುತ್ತವೆ. ಪೆಪ್ಪೆರೋನಿ ಮತ್ತು ಸಾಸೇಜ್‌ನಂತಹ ಸಂಸ್ಕರಿಸಿದ ಮಾಂಸವನ್ನು ತಿನ್ನುವುದರಿಂದ ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚಾಗುತ್ತದೆ.
ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಇದರ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸ್ಯಾಚುರೇಟೆಡ್ ಕೊಬ್ಬನ್ನು ಕಡಿಮೆ ಮಾಡಲು ಹೇಳುತ್ತದೆ. ಆದರೆ ಯಾರೂ ಕೇಳುವುದಿಲ್ಲ. ಅಮೆರಿಕದಲ್ಲಿಯೂ ಸಹ, ಜನರು ಹೆಚ್ಚು ಪಿಝಾ ತಿಂದು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.

