Tuesday, January 13, 2026
Tuesday, January 13, 2026
spot_img

Pickle | ಡೈಲಿ ಉಪ್ಪಿನಕಾಯಿ ತಿಂದ್ರೆ ಎಷ್ಟೆಲ್ಲಾ ಲಾಭ ಇದೆ ಗೊತ್ತಾ?

ಭಾರತೀಯ ಊಟದ ತಟ್ಟೆಯಲ್ಲಿ ಶತಮಾನಗಳಿಂದ ತನ್ನದೇ ಆದ ಸ್ಥಾನ ಉಳಿಸಿಕೊಂಡಿರುವ ಉಪ್ಪಿನಕಾಯಿ ಇಂದು ಕೇವಲ ರುಚಿಗೆ ಸೀಮಿತವಾಗಿಲ್ಲ, ಆರೋಗ್ಯದ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿದೆ. ಹಳ್ಳಿಯ ಮನೆಗಳಿಂದ ಹಿಡಿದು ನಗರ ಜೀವನದವರೆಗೆ ಉಪ್ಪಿನಕಾಯಿ ಇಲ್ಲದೆ ಊಟ ಅಪೂರ್ಣ ಎನ್ನುವ ಭಾವನೆ ಇನ್ನೂ ಜೀವಂತವಾಗಿದೆ. ಶುಭ ಕಾರ್ಯಗಳ ಭೋಜನವಾಗಲಿ ಅಥವಾ ದಿನನಿತ್ಯದ ಊಟವಾಗಲಿ, ಸ್ವಲ್ಪ ಉಪ್ಪಿನಕಾಯಿ ಆಹಾರಕ್ಕೆ ವಿಶೇಷ ರುಚಿ ನೀಡುತ್ತದೆ.

ತಜ್ಞರ ಪ್ರಕಾರ, ಮನೆಯಲ್ಲೇ ತಯಾರಿಸಿದ ಉಪ್ಪಿನಕಾಯಿಗಳು ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿ. ಸಾಸಿವೆ, ಮೆಂತ್ಯ, ಇಂಗು ಮತ್ತು ನೈಸರ್ಗಿಕ ಮಸಾಲೆಗಳಿಂದ ಮಾಡಿದ ಉಪ್ಪಿನಕಾಯಿಯಲ್ಲಿ ಪ್ರೋಬಯೋಟಿಕ್‌ಗಳು ಸಮೃದ್ಧವಾಗಿದ್ದು, ಕರುಳಿನ ಆರೋಗ್ಯವನ್ನು ಉತ್ತಮಪಡಿಸುತ್ತವೆ. ಇದರಿಂದ ಹೊಟ್ಟೆ ಉಬ್ಬರ, ಅಜೀರ್ಣದಂತಹ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆರೋಗ್ಯಕರ ಕರುಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರಿಂದ, ದೇಹ ಸೋಂಕುಗಳ ವಿರುದ್ಧ ಹೆಚ್ಚು ಶಕ್ತಿಯಾಗುತ್ತದೆ.

ವಿನೆಗರ್ ಬಳಸಿ ತಯಾರಿಸಿದ ಕೆಲವು ಉಪ್ಪಿನಕಾಯಿಗಳು ಸ್ನಾಯು ಸೆಳೆತವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತವೆ. ಜೊತೆಗೆ, ಉಪ್ಪಿನಕಾಯಿಯ ರುಚಿ ಹಸಿವನ್ನು ಉತ್ತೇಜಿಸುವುದರಿಂದ ಆಹಾರ ಆಸಕ್ತಿ ಹೆಚ್ಚುತ್ತದೆ. ಆದರೆ ಮಾರುಕಟ್ಟೆಯಲ್ಲಿನ ಅತಿಯಾದ ಉಪ್ಪು ಮತ್ತು ಎಣ್ಣೆ ಬಳಕೆಯ ಉಪ್ಪಿನಕಾಯಿಗಳ ಬದಲು, ಮನೆಯ ಉಪ್ಪಿನಕಾಯಿಗಳನ್ನು ಮಿತವಾಗಿ ಸೇವಿಸುವುದು ಆರೋಗ್ಯಕ್ಕೆ ಉತ್ತಮ ಎಂಬುದು ವೈದ್ಯರ ಸಲಹೆ. (Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

Most Read

error: Content is protected !!