February 17, 2026
Tuesday, February 17, 2026
spot_img

ಈ ಬಾರಿ ಪ್ರೇಮಿಗಳ ದಿನಕ್ಕೆ ಬೆಂಗಳೂರಿನಿಂದ ರಫ್ತಾಗಿರೋ ಗುಲಾಬಿಗಳ ಸಂಖ್ಯೆಯೆಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ಬಾರಿಯ ಪ್ರೇಮಿಗಳ ದಿನಕ್ಕೆ ಎಲ್ಲರೂ ರೆಡ್‌ರೋಸ್‌ ಬಳಕೆ ಮಾಡಿದ್ದಾರೆ. ಬೆಂಗಳೂರಿನಿಂದ ಹೊರಕ್ಕೆ ಹೋಗಿರುವ ಗುಲಾಬಿ ಹೂವಿನ ಸಂಖ್ಯೆ ದಾಖಲೆ ಮಾಡಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರೇಮಿಗಳ ದಿನದ (ಫೆ.14) ಸಂದರ್ಭದಲ್ಲಿ ದಾಖಲೆಯ 6 ಕೋಟಿ ಗುಲಾಬಿ ಹೂವುಗಳನ್ನು ವಿವಿಧೆಡೆಗೆ ರಫ್ತು ಮಾಡಿದೆ.

ಪ್ರೇಮಿಗಳ ದಿನದಂದು ಹೂವುಗಳಿಗೆ ಬೇಡಿಕೆ ಹೆಚ್ಚಿರುವುದೇ ರಫ್ತು ಪ್ರಮಾಣ ಹೆಚ್ಚಳಕ್ಕೆ ಕಾರಣ ಎಂದು ಕೆಐಎ ತಿಳಿಸಿದೆ. ಪ್ರೇಮಿಗಳ ದಿನದ ಹಿನ್ನೆಲೆ 2,700 ಮೆಟ್ರಿಕ್ ಟನ್ ತೂಕದ ಹೂವುಗಳನ್ನು 26 ಅಂತಾರಾಷ್ಟ್ರೀಯ ಮತ್ತು 47 ದೇಶೀಯ ತಾಣಗಳಿಗೆ ಕಳುಹಿಸಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಹೂವುಗಳ ಸಂಖ್ಯೆಯಲ್ಲಿ ಶೇ.38 ಹಾಗೂ ತೂಕದಲ್ಲಿ ಶೇ.64 ರಷ್ಟು ಏರಿಕೆಯಾಗಿದೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಿಳಿಸಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿಂಗಾಪುರ ಪ್ರಮುಖ ಗಮ್ಯಸ್ಥಾನವಾಗಿದ್ದು, ನಂತರ ಕೌಲಾಲಂಪುರ, ಅಬುಧಾಬಿ, ನ್ಯೂಯಾರ್ಕ್ ಮತ್ತು ಕುವೈತ್ ಪ್ರಮುಖ ಮಾರುಕಟ್ಟೆಗಳಾಗಿವೆ. ಈ ಬಾರಿ ಲಾಸ್ ಏಂಜೆಲಿಸ್, ಲಂಡನ್ ಗ್ಯಾಟ್ವಿಕ್, ಡಲ್ಲಾಸ್, ಟೊರಾಂಟೋ ಮತ್ತು ಓರ್ಲ್ಯಾಂಡೋ ಹೊಸ ಗಮ್ಯಸ್ಥಾನಗಳಾಗಿ ಸೇರ್ಪಡೆಗೊಂಡಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !