February 4, 2026
Wednesday, February 4, 2026
spot_img

ಮಗಳಿಗೆ 50ರವರೆಗೆ ಸಂಖ್ಯೆ ಬರೆಯಲು ಬರಲ್ಲ ಅಂತ ‘ಪಾಪಿ ಅಪ್ಪ’ ಮಾಡಿದ್ದೇನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಲ್ಕು ವರ್ಷದ ಮಗಳಿಗೆ ಮನೆಪಾಠ ಹೇಳಿಸುವ ಸಂದರ್ಭದಲ್ಲಿ 50 ರವರೆಗೆ ಸಂಖ್ಯೆ ಬರೆಯಲು ಆಗದ ಕಾರಣ ತಂದೆಯೇ ಮಗಳನ್ನು ಥಳಿಸಿ ಕೊಂದ ಘಟನೆ ಫರಿದಾಬಾದ್‌ ನಲ್ಲಿ ನಡೆದಿದೆ.

ಫರಿದಾಬಾದ್‌ನ ಸೆಕ್ಟರ್–58 ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಂತೆ, ಕೃಷ್ಣ ಜೈಸ್ವಾಲ್ (31) ಎಂಬಾತನನ್ನು ಬಂಧಿಸಲಾಗಿದೆ.

ಆರೋಪಿ ಜೈಸ್ವಾಲ್ ಮೂಲತಃ ಉತ್ತರ ಪ್ರದೇಶದ ಸೋನ್‌ಭದ್ರ ಜಿಲ್ಲೆಯ ಖೇರತಿಯಾ ಗ್ರಾಮದ ನಿವಾಸಿಯಾಗಿದ್ದು, ಫರಿದಾಬಾದ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದನು.

ಪೊಲೀಸರ ಪ್ರಕಾರ, ಜೈಸ್ವಾಲ್ ಮತ್ತು ಅವರ ಪತ್ನಿ ಇಬ್ಬರೂ ಖಾಸಗಿ ಕಂಪನಿಗಳಲ್ಲಿ ಉದ್ಯೋಗದಲ್ಲಿದ್ದರು. ತಾಯಿ ಹಗಲಿನಲ್ಲಿ ಕೆಲಸಕ್ಕೆ ತೆರಳುತ್ತಿದ್ದರೆ, ಮನೆಯಲ್ಲೇ ಉಳಿಯುತ್ತಿದ್ದ ಜೈಸ್ವಾಲ್ ಮಕ್ಕಳ ಆರೈಕೆ ಹಾಗೂ ಮಗಳ ಪಾಠದ ಜವಾಬ್ದಾರಿ ವಹಿಸಿಕೊಂಡಿದ್ದನು. ಜನವರಿ 21ರಂದು ಆತ ಮಗಳಿಗೆ ಒಂದರಿಂದ 50ರವರೆಗೆ ಸಂಖ್ಯೆಗಳು ಬರೆಯಲು ಹೇಳಿದ್ದ. ಮಗು ಅದನ್ನು ಪೂರ್ಣಗೊಳಿಸಲು ವಿಫಲವಾದಾಗ, ಆತ ಕೋಪದ ಆವೇಶದಲ್ಲಿ ಆಕೆಯನ್ನು ಥಳಿಸಿದ್ದಾನೆ.

ಸಂಜೆ ತಾಯಿ ಕೆಲಸದಿಂದ ಮನೆಗೆ ಬಂದಾಗ ಮಗು ಮೃತಪಟ್ಟಿರುವುದು ಕಂಡುಬಂದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !