Thursday, January 29, 2026
Thursday, January 29, 2026
spot_img

ಜಗತ್ತಿನ 5 ಅತ್ಯಂತ strongest ಕರೆನ್ಸಿಗಳನ್ನು ಹೊಂದಿರುವ ದೇಶ ಯಾವುದು ಗೊತ್ತಾ? ನಮ್ಮ ಇಂಡಿಯಾನೂ ಇದ್ಯಾ?

ಕರೆನ್ಸಿಯ ಮೌಲ್ಯ ಅಂದ್ರೆ ದೇಶದ ಆರ್ಥಿಕ ಶಕ್ತಿ, ಸ್ಥಿರತೆ ಮತ್ತು ಜಾಗತಿಕ ವಿಶ್ವಾಸದ ಪ್ರತಿಬಿಂಬ. “ಪ್ರಪಂಚದಲ್ಲಿ ಅತಿ ಬಲಿಷ್ಠ ಕರೆನ್ಸಿ ಯಾವುದು?” ಅಂತ ಕೇಳಿದ್ರೆ ಹೆಚ್ಚಿನವರು ಡಾಲರ್ ಅಂತ ಹೇಳ್ತಾರೆ. ಆದರೆ ವಾಸ್ತವ ಅಚ್ಚರಿ ಮೂಡಿಸುವಂತಿದೆ.

ಕುವೈತ್ (Kuwaiti Dinar)
ಇದು ವಿಶ್ವದ ನಂಬರ್ 1 ಶಕ್ತಿಯುತ ಕರೆನ್ಸಿ. ಒಂದು ಕುವೈತ್ ದಿನಾರ್ ಸರಿಸುಮಾರು 300 ರೂಪಾಯಿಗೆ ಸಮಾನವಾಗಿದೆ. ತೈಲ ಸಂಪತ್ತು ಮತ್ತು ಸ್ಥಿರ ಆರ್ಥಿಕತೆಯೇ ಕಾರಣ.

ಬಹ್ರೇನ್ (Bahraini Dinar)
ಚಿಕ್ಕ ದೇಶವಾದರೂ ಬ್ಯಾಂಕಿಂಗ್ ಮತ್ತು ತೈಲ ಕ್ಷೇತ್ರದಿಂದ ಬಲಿಷ್ಠ ಕರೆನ್ಸಿ.ಇದು ಅಮೇರಿಕನ್ ಡಾಲರ್‌ಗೆ ಸ್ಥಿರವಾದ ದರವನ್ನು ಹೊಂದಿದೆ.

ಒಮಾನ್ (Omani Rial)
ನಿಯಂತ್ರಿತ ಆರ್ಥಿಕ ನೀತಿ ಮತ್ತು ತೈಲ ಆಧಾರಿತ ಆದಾಯ ಇದನ್ನು ಶಕ್ತಿಶಾಲಿಯಾಗಿ ಮಾಡಿದೆ.

ಜೋರ್ಡಾನ್ (Jordanian Dinar)
ತೈಲ ಸಂಪತ್ತು ಕಡಿಮೆ ಇದ್ದರೂ ಕರೆನ್ಸಿ ಕಟ್ಟುನಿಟ್ಟಾಗಿ ನಿಯಂತ್ರಿಸಲಾಗಿದೆ.

ಬ್ರಿಟನ್ (British Pound)
ಹಳೆಯದಾದರೂ ಇಂದಿಗೂ ಜಾಗತಿಕವಾಗಿ ಪ್ರಭಾವಿ ಕರೆನ್ಸಿ. ಈ ಕರೆನ್ಸಿಯ ಮೌಲ್ಯ ಸುಮಾರು 122 ರೂಪಾಯಿ ಆಗಿದೆ.

ಹಾಗಾದ್ರೆ ಭಾರತ?
ಭಾರತೀಯ ರೂಪಾಯಿ ಈ ಟಾಪ್ 5 ಪಟ್ಟಿಯಲ್ಲಿ ಇಲ್ಲ. ಆದರೆ ರೂಪಾಯಿ ಸ್ಥಿರತೆ, ದೊಡ್ಡ ಆಂತರಿಕ ಮಾರುಕಟ್ಟೆ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಿಂದ ರೂಪಾಯಿ ಜಾಗತಿಕವಾಗಿ ಗೌರವ ಪಡೆದ ಕರೆನ್ಸಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !