Monday, September 8, 2025

ಜಗತ್ತಿನ ಅತ್ಯಂತ expensive ಗುಲಾಬಿ ಯಾವುದು ಗೊತ್ತಾ? ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಲಾಬಿ ಹೂವು ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಮಾಧ್ಯಮ ಅಂದ್ರು ತಪ್ಪಾಗಲ್ಲ. ಅದ್ರಲ್ಲೂ ಕೆಂಪು ಗುಲಾಬಿ ಎಂದರೆ ಪ್ರೀತಿಯ ಪ್ರತೀಕ ಎನ್ನುವುದರಲ್ಲಿ ಸಂದೇಹವಿಲ್ಲ. ಸಾಮಾನ್ಯ ದಿನಗಳಲ್ಲಿ ಕಡಿಮೆ ದರದಲ್ಲಿ ಸಿಗುವ ಹೂವು, ಪ್ರೇಮಿಗಳ ದಿನದಂದು ಬೆಲೆ ಏರಿಕೆ ಕಂಡು ಹಲವರಿಗೆ ಅಚ್ಚರಿಯನ್ನೇ ಉಂಟುಮಾಡುತ್ತದೆ. ಆದರೂ ಪ್ರೀತಿ ವ್ಯಕ್ತಪಡಿಸಲು ಜನರು ಗುಲಾಬಿಯನ್ನು ಖರೀದಿಸಲು ಹಿಂದೆ ಮುಂದೆ ನೋಡುವುದಿಲ್ಲ.

ಆದರೆ, ಜಗತ್ತಿನಲ್ಲಿ ಒಂದು ಗುಲಾಬಿ ಹೂವು ಇಷ್ಟೊಂದು ದುಬಾರಿಯಾಗಿರಬಹುದು ಎಂದು ಕೇಳಿದರೆ ನೀವು ನಂಬುವುದೇ ಕಷ್ಟ. ಆ ವಿಶೇಷ ಹೂವಿನ ಹೆಸರು ಜ್ಯೂಲಿಯಟ್ ರೋಸ್. ಸಾಮಾನ್ಯ ಗುಲಾಬಿಯಂತೆ ಇದನ್ನು ಬೆಳೆಸುವುದು ಸುಲಭವಲ್ಲ. 15 ವರ್ಷಗಳ ಕಾಲ ಶ್ರಮಿಸಿದ ಹೂಗಾರ ಡೇವಿಡ್ ಆಸ್ಟೀನ್ ಈ ವಿಶಿಷ್ಟ ಗುಲಾಬಿಯನ್ನು ಕ್ರಾಸ್‌ಬ್ರೀಡಿಂಗ್ ಮೂಲಕ ಪರಿಚಯಿಸಿದರು. 2006ರಲ್ಲಿ ಮೊದಲ ಬಾರಿಗೆ ಜ್ಯೂಲಿಯಟ್ ರೋಸ್ ಮಾರುಕಟ್ಟೆಗೆ ಬಂದಾಗಲೇ ಇದು ಸುಮಾರು 90 ಕೋಟಿ ರೂಪಾಯಿಗೆ ಮಾರಾಟವಾಯಿತು. ಅಂದಿನಿಂದಲೇ ಇದು ಜಗತ್ತಿನ ಅತ್ಯಂತ ದುಬಾರಿ ಗುಲಾಬಿ ಎಂಬ ಹೆಸರು ಪಡೆದಿದೆ.

ಜ್ಯೂಲಿಯಟ್ ರೋಸ್ ದುಬಾರಿ ಆಗಿರುವ ಪ್ರಮುಖ ಕಾರಣ ಅದರ ಸೌಂದರ್ಯ ಮತ್ತು ವಿಶೇಷ ಪರಿಮಳ. ಇದು ಕೇವಲ ಒಂದು ದಿನದ ಅಂದವಲ್ಲ, ಸುಮಾರು ಮೂರು ವರ್ಷಗಳವರೆಗೆ ತನ್ನ ತಾಜಾತನವನ್ನು ಕಾಪಾಡಿಕೊಳ್ಳುವ ಗುಣವನ್ನು ಹೊಂದಿದೆ. ಹೀಗಾಗಿ ಇದರ ಮೌಲ್ಯ ಇನ್ನಷ್ಟು ಹೆಚ್ಚಾಗಿದೆ.

ಜ್ಯೂಲಿಯಟ್ ರೋಸ್ ಹೊರತಾಗಿ ಶ್ರೀಲಂಕಾದ ಕಡುಪುಲ ಹೂವು ಕೂಡ ವಿರಳ ಹಾಗೂ ದುಬಾರಿ ಹೂವುಗಳಲ್ಲಿ ಒಂದಾಗಿದೆ. ಇದು ಕೇವಲ ರಾತ್ರಿ ಸಮಯದಲ್ಲಷ್ಟೇ ಅರಳುತ್ತದೆ ಮತ್ತು ಅಲ್ಲಿ ಮಾತ್ರ ಸಿಗುತ್ತದೆ.

ಪ್ರೀತಿ ಎಂದರೆ ಅನನ್ಯ ಭಾವನೆ. ಅದನ್ನು ವ್ಯಕ್ತಪಡಿಸಲು ಗುಲಾಬಿ ಹೂವು ಪ್ರಮುಖ ಪಾತ್ರವಹಿಸುತ್ತದೆ. ಆದರೆ ಜ್ಯೂಲಿಯಟ್ ರೋಸ್‌ನಂತಹ ವಿರಳ ಹೂವುಗಳು ಕೇವಲ ಪ್ರೀತಿಯ ಸಂಕೇತವಷ್ಟೇ ಅಲ್ಲ, ಪ್ರಕೃತಿಯ ಅದ್ಭುತ ಕಲೆಗೊಂದು ನಿದರ್ಶನವೂ ಆಗಿವೆ. ಹೀಗಾಗಿ ಪ್ರೀತಿ ಹೂವಿನ ಬೆಲೆಯಲ್ಲಿ ಅಲ್ಲ, ಅದರ ಭಾವದಲ್ಲಿ ಅಡಗಿದೆ ಎನ್ನುವುದನ್ನು ಮರೆಯೋಹಾಗಿಲ್ಲ.

ಇದನ್ನೂ ಓದಿ