Friday, December 12, 2025

ಈ ವರ್ಷ ಗೂಗಲ್‌ನಲ್ಲಿ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ ಸ್ಥಳಗಳ್ಯಾವ್ದು ಗೊತ್ತಾ?

2025ರ ವರ್ಷದ ಕೊನೆಗೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ವರ್ಷಾಂತ್ಯದಲ್ಲಿ ಗೂಗಲ್ ‘ಇಯರ್ ಇನ್ ಸರ್ಚ್ 2025’ ಎಂಬ ಶೀರ್ಷಿಕೆಯ ವರದಿಯನ್ನು ಬಿಡುಗಡೆಗೊಳಿಸಿದೆ. 2025ರಲ್ಲಿ ಭಾರತೀಯರು ಅತಿ ಹೆಚ್ಚು ಸರ್ಚ್​ ಮಾಡಿದ ಸ್ಥಳಗಳನ್ನು ಯಾವುವು ಎಂಬುದರ ಪಟ್ಟಿಯನ್ನು ನೀಡಿದೆ.

ಈ ವರ್ಷದಲ್ಲಿ ‘ಮಹಾ ಕುಂಭಮೇಳ’ ಗೂಗಲ್ ‘ಟ್ರೆಂಡಿಂಗ್ ಟ್ರೆಂಡ್ಸ್’ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮಹಾ ಕುಂಭಮೇಳವು ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಉತ್ಸವವಾಗಿದೆ. 2025ರ ಜನವರಿ 13ರಿಂದ ಫೆಬ್ರವರಿ 26ರವರೆಗೆ 45 ದಿನಗಳ ಕಾಲ ಪ್ರಸಿದ್ಧ ಪ್ರಯಾಗರಾಜ್ ನಗರದಲ್ಲಿ ನಡೆದ ಈ ಭವ್ಯ ಕಾರ್ಯಕ್ರಮದಲ್ಲಿ ಕೋಟ್ಯಂತರ ಭಕ್ತರು ಭಾಗವಹಿಸಿದ್ದರು. 

ಗುಜರಾತ್‌ನಲ್ಲಿರುವ ಸೋಮನಾಥ ದೇವಾಲಯವು ಶಿವ ಹನ್ನೆರಡು ಜ್ಯೋತಿರ್ಲಿಂಗ ಮೊದಲನೆಯದ್ದು ಎಂದು ಪ್ರಸಿದ್ಧಿ ಪಡೆದುಕೊಂಡಿದೆ. ಇದು ಒಂದು ಬದಿಯಲ್ಲಿ ಅರೇಬಿಯನ್ ಸಮುದ್ರ ಹಾಗೂ ಇನ್ನೊಂದು ಬದಿಯಲ್ಲಿ ಹಿರಣ್, ಕಪಿಲ್, ಸರಸ್ವತಿ ನದಿಗಳ ತ್ರಿವೇಣಿ ಸಂಗಮ ಹೊಂದಿದ್ದು, ಎಲ್ಲಾ ಭಕ್ತರನ್ನು ಆಕರ್ಷಿಸುತ್ತದೆ. 

ಫ್ರೆಂಚ್ ವಸಾಹತುಶಾಹಿ ಆಳ್ವಿಕೆ, ಆಧ್ಯಾತ್ಮಿಕತೆ ಮತ್ತು ನೈಸರ್ಗಿಕ ಸೌಂದರ್ಯದ ಮುದ್ರೆಗಳಿಗೆ ಪುದುಚೇರಿ ಹೆಸರುವಾಸಿಯಾಗಿದೆ. ಅದಕ್ಕಾಗಿಯೇ ಪುದುಚೇರಿ ವಾರಾಂತ್ಯದ ರಜಾ ತಾಣಗಳಿಗೆ ಟ್ರೆಂಡಿಂಗ್ ತಾಣವಾಗಿದೆ. ಅಲ್ಲದೇ, ಫ್ರೆಂಚ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ ಕಟ್ಟಡಗಳು, ವಿಶಾಲವಾದ ಬೌಲೆವಾರ್ಡ್‌ಗಳು ಹಾಗೂ ಸುಂದರವಾದ ಬೀದಿಗಳು ಯುರೋಪಿನಲ್ಲಿ ಸಂಚಾರ ಮಾಡಿದಂತೆ ಅನುಭವವನ್ನು ನೀಡುತ್ತವೆ.

ಕಾಶ್ಮೀರವನ್ನು ಅದರ ಅದ್ಭುತ ನೈಸರ್ಗಿಕ ಸೌಂದರ್ಯ, ಹಿಮದಿಂದ ಆವೃತವಾದ ಪರ್ವತಗಳು, ಸುಂದರವಾದ ಕಣಿವೆಗಳು, ಸರೋವರಗಳು, ಹಸಿರು ಹುಲ್ಲುಗಾವಲುಗಳು, ಚಿನಾರ್ ಮರಗಳು ಹಾಗೂ ಶಾಂತಿಯುತ ವಾತಾವರಣದಿಂದಾಗಿ ‘ಭೂಮಿಯ ಮೇಲಿನ ಸ್ವರ್ಗ’ ಎಂದು ಕರೆಯಲಾಗುತ್ತದೆ.

error: Content is protected !!