March 5, 2026
Thursday, March 5, 2026
spot_img

HAND CREAM |ಅಂಗೈ ಅಂದ ಕಾಪಾಡಿಕೊಳ್ಳೋಕೆ ಆಗಾಗ ಹಚ್ಚಿ ಹ್ಯಾಂಡ್‌ ಕ್ರೀಂ, ಯಾಕೆ ಗೊತ್ತಾ?

ಆಫೀಸ್‌ಗೆ ಹೋಗುವ ಹೆಣ್ಣುಮಕ್ಕಳು ತಮ್ಮ ಬ್ಯಾಗ್‌ನಲ್ಲಿ ಏನಿಲ್ಲ ಎಂದರೂ ಹ್ಯಾಂಡ್‌ ಕ್ರೀಮ್‌ನ್ನು ಇಟ್ಟುಕೊಂಡಿರುತ್ತಾರೆ. ಕೆಲಸದ ಮಧ್ಯೆ ಮಧ್ಯೆ ಕ್ರೀಮ್‌ನ್ನು ಕೈಗೆ ಹಚ್ಚಿಕೊಳ್ಳುತ್ತಾರೆ. ಇದರಿಂದ ಕೈ ಸಾಫ್ಟ್‌ ಆಗಿರುತ್ತದೆ. ಹ್ಯಾಂಡ್‌ ಕ್ರೀಮ್‌ನಿಂದ ಇನ್ನೇನು ಲಾಭ ಇದೆ?

ಬಾಡಿ ಲೋಷನ್‌ ಹಚ್ಚುವಾಗ ಕೈಗೆ ಹಚ್ಚುತ್ತೇವೆ ಆದರೆ ಕೆಲಸ ಮಾಡುವ ಅಂಗೈಗಳಿಗೆ ಹಚ್ಚೋದಿಲ್ಲ. ಇದರಿಂದ ಅಂಗೈ ಮಾತ್ರ ಡ್ರೈ ಆಗುತ್ತದೆ. ಅಲ್ಲಲ್ಲಿ ಬಿರುಕು ಬಿಟ್ಟು, ವಯಸ್ಸಾದ ಕೈಗಳಂತೆ ಕಾಣುತ್ತದೆ. ಇದಕ್ಕಾಗಿ ಹ್ಯಾಂಡ್‌ ಕ್ರೀಂ ಬಳಕೆ ಮಾಡಿ.

ಕ್ರೀಂನಿಂದ ಅಂಗೈಗೆ ಹೈಡ್ರೇಷನ್‌ ಸಿಗುತ್ತದೆ. ಕ್ರಾಕ್‌ ಆಗಿರುವ ಸ್ಕಿನ್‌ ಸೆಲ್ಸ್‌ ರಿಪೇರ್‌ ಆಗುತ್ತದೆ. ನಿತ್ಯದ ಓಡಾಟ, ಕೆಟ್ಟ ಸೋಪ್‌ ಬಳಕೆಯಿಂದ ಡ್ಯಾಮೇಜ್‌ ಆಗಿರುವ ಸ್ಕಿನ್‌ ನಿಧಾನಕ್ಕೆ ನಾರ್ಮಲ್‌ ಆಗುತ್ತದೆ.

ಈ ರೀತಿ ಹ್ಯಾಂಡ್‌ ಕ್ರೀಂಗಳನ್ನು ಆಗಾಗ ಬಳಸುವುದರಿಂದ ಮುಂದಿನ ಸಮಯದಲ್ಲಿ ನಿಮ್ಮ ಕೈ ವಯಸಾದಂತೆ ಕಾಣುವುದಿಲ್ಲ.

ಕೆಟ್ಟ ವೆದರ್‌ ಕಂಡೀಷನ್ಸ್‌, ಬಿಸಿಲು, ಧೂಳು, ಗಾಳಿಯಿಂದ ಸ್ಕಿನ್‌ ಹಾಳಾಗುವುದನ್ನು ಕ್ರೀಂ ತಡೆಗಟ್ಟುತ್ತದೆ.

ಚರ್ಮದ ಆರೋಗ್ಯ ಹಾಗೂ ಅದು ಕಾಣುವ ರೀತಿಯನ್ನು ಬದಲಾಯಿಸುತ್ತದೆ. ಮೊದಲಿಗಿಂತ ನಿಮ್ಮ ಸ್ಕಿನ್‌ ಸಾಫ್ಟ್‌ ಆಗಿದೆ ಎನ್ನುವುದನ್ನು ಗಮನಿಸುತ್ತೀರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !