ನಮ್ಮ ದೈನಂದಿನ ಜೀವನದಲ್ಲಿ ತೂಕ ನಿಯಂತ್ರಣಕ್ಕೆ ತರಲು ನಮ್ಮ ದಿನನಿತ್ಯದ ಉಪಹಾರವೇ ಮುಖ್ಯ ಪಾತ್ರ ವಹಿಸುತ್ತದೆ. ವಿಶೇಷವಾಗಿ ಪ್ರೋಟೀನ್ ಯುಕ್ತ ಆಹಾರಗಳನ್ನು ಉಪಹಾರದಲ್ಲಿ ಸೇರಿಸಿಕೊಳ್ಳುವುದು ದೇಹಕ್ಕೆ ಶಕ್ತಿಯೊಂದಿಗೆ ಆರೋಗ್ಯವನ್ನೂ ನೀಡುತ್ತದೆ.

ಪ್ರೋಟೀನ್ ಯುಕ್ತ ಉಪಹಾರ
ನಿತ್ಯ ಕನಿಷ್ಠ 30 ಗ್ರಾಂಗಿಂತ ಹೆಚ್ಚು ಪ್ರೋಟೀನ್ ಉಪಹಾರದಲ್ಲಿ ಇರಬೇಕು. ಉದಾಹರಣೆಗೆ ಎರಡು ಇಡೀ ಮೊಟ್ಟೆಗಳ ಜೊತೆಗೆ ಒಂದು ಕಪ್ ಎಗ್ ವೈಟ್, ಇಲ್ಲವೇ, ಎರಡು ಮೊಟ್ಟೆಗಳ ಜೊತೆ ಚಿಕನ್ ಸಾಸೇಜಸ್ ಅಥವಾ ಗ್ರೀಕ್ ಯೋಗರ್ಟ್ ಸೇವಿಸಬಹುದು. ಸಸ್ಯಾಹಾರಿಗಳು ಬೇಳೆ, ಕಡಲೆ, ನಟ್ಸ್ ಮತ್ತು ಗ್ರೀಕ್ ಯೋಗರ್ಟ್‌ನಂತಹ ಆಯ್ಕೆಗಳು ಬಳಸಬಹುದು.

ಆರೋಗ್ಯ ಲಾಭ
ಪ್ರೋಟೀನ್ ದೇಹದ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ದಿನವಿಡೀ ತೃಪ್ತಿಯ ಭಾವನೆಯನ್ನು ನೀಡುತ್ತದೆ. ಇದರಿಂದ ತೂಕ ನಿಯಂತ್ರಣ ಸುಲಭವಾಗುತ್ತದೆ.

ಉಪಹಾರದಲ್ಲಿ ಪ್ರೋಟೀನ್ ಯುಕ್ತ ಆಹಾರಗಳನ್ನು ಸೇರಿಸಿಕೊಳ್ಳುವುದು ತೂಕ ಇಳಿಕೆಗೆ ಮಾತ್ರವಲ್ಲ, ದೀರ್ಘಕಾಲದ ಆರೋಗ್ಯಕ್ಕೆ ಸಹ ಉಪಯುಕ್ತ. ಸರಿಯಾದ ಆಯ್ಕೆಗಳನ್ನು ಮಾಡಿದರೆ ದೇಹ ಸದೃಢವಾಗಿ, ಶಕ್ತಿವಂತರಾಗಿ ಉಳಿಯಲು ಸಾಧ್ಯ.