ಕುಟುಂಬದ ಸದಸ್ಯರೊಂದಿಗೆ ಒಟ್ಟಿಗೆ ಊಟ ಮಾಡುವುದು ಒತ್ತಡವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಇದು ಕುಟುಂಬ ಸದಸ್ಯರ ನಡುವಿನ ಸಕಾರಾತ್ಮಕ ಸಂಭಾಷಣೆಗಳು ಹಾಗೂ ಸಂಬಂಧಗಳನ್ನು ಬೆಳೆಸಲು ಪ್ರೋತ್ಸಾಹಿಸುತ್ತದೆ. ಮನೆಯ ಎಲ್ಲ ಸದಸ್ಯರು ಕುಳಿತು ಊಟ ಮಾಡುವುದರಿಂದ ಒತ್ತಡ ತಗ್ಗಿಸಲು ಸಾಧ್ಯವಾಗುತ್ತದೆ
ಕುಟುಂಬದೊಂದಿಗೆ ಕುಳಿತು ಬೆಳಗ್ಗೆ ಉಪಹಾರ, ಮಧ್ಯಾಹ್ನ, ರಾತ್ರಿ ಊಟ ಮಾಡುವಾಗ ಸಣ್ಣ ಸಂಭಾಷಣೆಗಳು ಆಯಾಸ ನಿವಾರಿಸುವುದಲ್ಲದೇ, ನಿಮ್ಮ ಮನಸ್ಸಿನ ವಿಶ್ರಾಂತಿಗೆ ಕೂಡ ಸಹಾಯವಾಗುತ್ತದೆ. ಈ ಸಣ್ಣ ಸಂಭಾಷಣೆಗಳು ನಿಮ್ಮ ದೇಹದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಅನ್ನು ಸಕ್ರಿಯಗೊಳಿಸುತ್ತವೆ. ಈ ಹಾರ್ಮೋನ್ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಕಡಿಮೆ ಮಾಡುತ್ತದೆ. ಇದರಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ. ಈ ಸಂಭಾಷಣೆಗಳು ನಿಮ್ಮನ್ನು ಭಾವನಾತ್ಮಕವಾಗಿ ಸುರಕ್ಷಿತವಾಗಿರಿಸುತ್ತವೆ. ಇದರೊಂದಿಗೆ ಊಟ ನಂತರ ಉತ್ತಮವಾಗಿ ನಿದ್ದೆ ಮಾಡಲು ತುಂಬಾ ಸಹಾಯ ಮಾಡುತ್ತದೆ.
ಮನೆಯ ಎಲ್ಲ ಸದಸ್ಯರು ಒಟ್ಟಿಗೆ ಕುಳಿತುಕೊಂಡು ಭೋಜನ ಸವಿಯುವಾಗ ಮೊಬೈಲ್ ಫೋನ್‌ಗಳನ್ನು ಬದಿಗಿಟ್ಟು ಮೋಜಿನ ಸಂಭಾಷಣೆ ನಡೆಸುತ್ತೇವೆ. ಇದು ದಿನದ ಆಯಾಸದಿಂದ ನಮ್ಮನ್ನು ಮುಕ್ತಗೊಳಿಸುತ್ತದೆ. ಜೊತೆಗೆ ನಮ್ಮನ್ನು ಸಂತೋಷಪಡಿಸುತ್ತದೆ, ಇದರೊಂದಿಗೆ ನಮ್ಮ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಒಟ್ಟಿಗೆ ಕುಳಿತು ಊಟ ಮಾಡುವಾಗ ನಾವು ನಿಧಾನವಾಗಿ ಆಹಾರವನ್ನು ತಿನ್ನುತ್ತೇವೆ. ಇದರ ಪರಿಣಾಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೊತೆಗೆ ಬೊಜ್ಜಿನ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಕೂಡ ಸಹಾಯವಾಗುತ್ತದೆ.
FAMILY TIME | ಮನೆಮಂದಿಯೆಲ್ಲಾ ಕುಳಿತು ಒಟ್ಟಿಗೇ ಡಿನ್ನರ್ ಮಾಡ್ತೀರಾ? ಇಲ್ಲಿದೆ ಮುಖ್ಯ ಬೆನಿಫಿಟ್ಸ್

