ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಚೂರಿನ ಮದುವೆ ಮನೆಯಲ್ಲೊಂದು ಅಚ್ಚರಿ ಘಟನೆ ನಡೆದಿದೆ. ಮದುವೆ ಮನೆಗೆ ವರನ ಎಕ್ಸ್ ಗರ್ಲ್‌ಫ್ರೆಂಡ್ ಎಂಟ್ರಿ ಕೊಟ್ಟಿದ್ದಾರೆ.
ಪ್ರೀತಿಸಿ ಮದುವೆಯಾಗಿ ಕೈಕೊಟ್ಟಿದ್ದ ಪ್ರಿಯಕರನ ಮದುವೆಯ ಸಂಭ್ರಮಕ್ಕೆ ಸಂತ್ರಸ್ತೆ ಏಕಾಏಕಿ ಎಂಟ್ರಿ ಕೊಟ್ಟಿದ್ದಾಳೆ. ಕೊಪ್ಪಳ ಮೂಲದ ಯುವತಿಗೆ ರಾಯಚೂರು ಮೂಲದ ಯುವಕನೊಬ್ಬ ಪ್ರೀತಿಸಿ, ದೈಹಿಕ ಸಂಪರ್ಕ ಬೆಳೆಸಿ, ಗರ್ಭಪಾತ ಮಾಡಿಸಿ ಕೊನೆಗೆ ನಂಬಿಸಿ ಮದುವೆಯಾಗಿ, ಈಗ ಆಕೆಗೆ ಕೈಕೊಟ್ಟಿದ್ದಾನೆ.
ರಾಯಚೂರು ಮೂಲದ ಯುವಕ ರಿಷಬ್ ವಿರುದ್ಧ ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ. ಬಳ್ಳಾರಿಯಲ್ಲಿ ಓದುತ್ತಿದ್ದ ವೇಳೆ ಯುವಕ ರಿಷಬ್ ಹಾಗೂ ಸಂತ್ರಸ್ತೆಗೆ ಪರಸ್ಪರ ಪರಿಚಯವಾಗಿತ್ತು. ಕಾಲೇಜಿನಲ್ಲಿ ಡಿಗ್ರಿ ಓದುವಾಗ ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಆ ಬಳಿಕ ಯುವಕ ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡು ನಂತರ ಮದುವೆಗೆಯಾಗೋದಾಗಿ ನಂಬಿಸಿ ಗರ್ಭಪಾತ ಮಾಡಿಸಿದ್ದಾನೆ ಎಂದು ಸಂತ್ರಸ್ತ ಯುವತಿ ರಿಷಬ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಯುವಕ ರಿಷಬ್ ಸಂತ್ರಸ್ತೆಯನ್ನ ದೇವಸ್ಥಾನವೊಂದರಲ್ಲಿ ಮದುವೆಯಾಗಿ ಬಳಿಕ ಸಂತ್ರಸ್ತೆಯನ್ನ ಅವಾಯ್ಡ್ ಮಾಡಿ, ರಾಯಚೂರು ನಗರದಲ್ಲಿ ಬೇರೋಬ್ಬ ಯುವತಿ ಜೊತೆ ಯುವಕನ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ, ಇನ್ಸ್ಟಾಗ್ರಾಂನಲ್ಲಿ ಪ್ರಿಯಕರನ ಮದುವೆ ಆಮಂತ್ರಣ ನೋಡಿದ ಸಂತ್ರಸ್ತೆ ರಾಯಚೂರಿಗೆ ಓಡೋಡಿ ಬಂದಿದ್ದಾಳೆ. ಸದ್ಯ ಮದುವೆ ಮುರಿದು ಬಿದ್ದಿದ್ದು, ಯುವಕ ರಿಷಬ್ ವಿರುದ್ಧ ರಾಯಚೂರಿನ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

