Monday, November 10, 2025

ಅಮೆರಿಕದ ಜನತೆಗೆ 1.77 ಲಕ್ಷ ರೂ. ಟ್ಯಾರಿಫ್ ಡಿವಿಡೆಂಡ್ ಘೋಷಿಸಿದ ಡೊನಾಲ್ಡ್ ಟ್ರಂಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿ ವ್ಯಕ್ತಿಗೆ 2,000 ಡಾಲರ್ (1.77 ಲಕ್ಷ ರೂ) ಟ್ಯಾರಿಫ್ ಡಿವಿಡೆಂಡ್ ಕೊಡುವುದಾಗಿ ತಮ್ಮ ಟ್ರೂತ್ ಸೋಷಿಯಲ್​ನ ಪೋಸ್ಟ್​ವೊಂದರಲ್ಲಿ ತಿಳಿಸಿದ್ಧಾರೆ. ಈ ಮೂಲಕ ಟ್ರಂಪ್ ಅವರು ತಮ್ಮ ಟ್ಯಾರಿಫ್ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ.

‘ಟ್ರಿಲಿಯನ್​ಗಟ್ಟಲೆ ಡಾಲರ್​ಗಳನ್ನು ಪಡೆಯುತ್ತಿದ್ದೇವೆ. 37 ಟ್ರಿಲಿಯನ್ ಡಾಲರ್ ಇರುವ ನಮ್ಮ ಬೆಟ್ಟದಷ್ಟು ಸಾಲವನ್ನು ಶೀಘ್ರದಲ್ಲೇ ತೀರಿಸಲು ಶುರು ಮಾಡುತ್ತೇವೆ. ಅಮೆರಿಕದಲ್ಲಿ ದಾಖಲೆಯ ಹೂಡಿಕೆ ಹರಿದು ಬರುತ್ತದೆ. ಎಲ್ಲೆಡೆಯೂ ಫ್ಯಾಕ್ಟರಿಗಳು ತಲೆ ಎತ್ತುತ್ತವೆ’ ಎಂದೂ ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ಅಮೆರಿಕನ್ನರಿಗೆ ಡಿವಿಡೆಂಡ್ ಪೇಔಟ್ ನೀಡಲಾಗುವುದು ಎಂದು ಈ ಹಿಂದೆಯೂ ಹೇಳಿದ್ದು, ಇದೀಗ ಅವರು ಪ್ರತಿ ವ್ಯಕ್ತಿಗೂ 2,000 ಡಾಲರ್ ಡಿವಿಡೆಂಡ್ ಸಿಗುತ್ತೆ ಎಂದಿದ್ದಾರೆ. ಆದರೆ, ಅಧಿಕ ಆದಾಯ ಇರುವ ವರ್ಗದವರನ್ನು ಬಿಟ್ಟು ಇತರರಿಗೆ ಇದು ಸಿಗಬಹುದು. ಆದರೆ, ಯಾವ ಮಟ್ಟದ ಆದಾಯವನ್ನು ಮಾನದಂಡವಾಗಿ ಇಡಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ.ಯಾವ ಜನರಿಗೆ ಡಿವಿಡೆಂಡ್ ನೀಡುವುದು, ಹೇಗೆ ನೀಡುವುದು ಎಂಬುದು ನಿರ್ಧಾರವಾಗಿಲ್ಲ.

ವರದಿಗಳ ಪ್ರಕಾರ ಕ್ಯಾಷ್ ರೂಪದಲ್ಲಿ ಇವುಗಳನ್ನು ನೀಡುವ ಸಾಧ್ಯತೆ ಇಲ್ಲ. ಅಂದರೆ ಭಾರತದಲ್ಲಿ ಪಿಎಂ ಕಿಸಾನ್ ಯೋಜನೆಯಲ್ಲಿ ಇರುವ ರೀತಿಯಲ್ಲಿ ಕ್ಯಾಷ್ ಪೇಔಟ್ ಅನ್ನು ಅಮೆರಿಕದಲ್ಲಿ ನೀಡುವ ಸಾಧ್ಯತೆ ಇಲ್ಲದೇ ಇರಬಹುದು.

ಕೆಳ ಆದಾಯ ಗುಂಪಿನ ಜನರಿಗೆ ಟ್ಯಾಕ್ಸ್ ರಿಯಾಯಿತಿಗಳನ್ನು ನೀಡುವುದು ಇತ್ಯಾದಿ ಕ್ರಮಗಳ ಮೂಲಕ ಪರೋಕ್ಷವಾಗಿ ಜನರಿಗೆ ಲಾಭ ತರುವಂತೆ ಮಾಡಬಹುದು. ಟ್ಯಾಕ್ಸ್ ಬಿಲ್​ನಲ್ಲಿ ಸಾಕಷ್ಟು ಡಿಡಕ್ಷನ್​ಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ.

error: Content is protected !!