ಇತ್ತೀಚೆಗೆ ಕತ್ತೆ ಹಾಲು ಆರೋಗ್ಯಕ್ಕೆ ಬಹಳ ಉತ್ತಮ ಅಂತ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ಚರ್ಮದ ಹೊಳಪಿನಿಂದ ಹಿಡಿದು ರೋಗನಿರೋಧಕ ಶಕ್ತಿವರೆಗೆ ಇದು ಹಲವು ಪ್ರಯೋಜನಗಳನ್ನು ಕೊಡುತ್ತದೆ ಎಂಬ ನಂಬಿಕೆ ಜನರಲ್ಲಿ ಹೆಚ್ಚಾಗಿದೆ. ಆದರೆ ನಾವು ಇದನ್ನು ನಿಜಕ್ಕೂ ಕುಡಿಬಹುದಾ? ಇದರ ಲಾಭ–ನಷ್ಟಗಳೇನು? ಕತ್ತೆ ಹಾಲಿನ ಬಗ್ಗೆ ವೈಜ್ಞಾನಿಕ ದೃಷ್ಟಿಯಿಂದ ತಿಳಿದುಕೊಳ್ಳುವುದು ಅಗತ್ಯ.
ಕತ್ತೆ ಹಾಲು ಏಕೆ ವಿಶೇಷ?
ಕತ್ತೆ ಹಾಲಿನ ಅಂಶಗಳು ತಾಯಿಹಾಲಿಗೆ ಹೋಲಿಕೆ ಆಗುತ್ತವೆ. ಲ್ಯಾಕ್ಟೋಸ್ ಪ್ರಮಾಣ ಸ್ವಲ್ಪ ಹೆಚ್ಚು ಇದ್ದರೂ ಕೊಬ್ಬಿನ ಪ್ರಮಾಣ ಬಹಳ ಕಡಿಮೆ. ಇದರಿಂದ ಜೀರ್ಣಕ್ರಿಯೆಗೆ ಸುಲಭವಾಗುತ್ತದೆ.
- ಚರ್ಮಕ್ಕೆ ಲಾಭಕಾರಿ: ಕತ್ತೆ ಹಾಲಿನಲ್ಲಿ ವಿಟಮಿನ್ A, B, E ಹೆಚ್ಚು ಇರುವುದರಿಂದ ಚರ್ಮದ ಮೃದುವಾಗುವಿಕೆ, ಹೈಡ್ರೇಶನ್ ಮತ್ತು ಕಂಗೊಳಿಗೆ ಸಹಕಾರಿ ಎಂದು ಹೇಳಲಾಗುತ್ತದೆ. ಆದ್ದರಿಂದ ಅನೇಕ ಬ್ಯೂಟಿ ಉತ್ಪನ್ನಗಳಲ್ಲಿ ಇದನ್ನು ಬಳಸಲಾಗುತ್ತದೆ.
- ರೋಗನಿರೋಧಕ ಶಕ್ತಿ: ಇದರಲ್ಲಿ ಇರುವ ಲೈಸೋಸೈಮ್ ಎಂಬ ಸಂಯೋಗ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಮಕ್ಕಳಿಗೂ ಇದು ಸಹಾಯಕ ಎನ್ನಲಾಗುತ್ತದೆ.
- ಜೀರ್ಣಕ್ಕೆ ಸುಲಭ: ಕೊಬ್ಬು ಕಡಿಮೆ ಇರುವುದರಿಂದ ಹಾಲು ಸುಲಭವಾಗಿ ಜೀರ್ಣವಾಗುತ್ತದೆ. ಹಗುರ ಆಹಾರ ಸೇವಿಸುವವರಿಗೆ ಇದು ಸೂಕ್ತ.
- ಆಲರ್ಜಿಯ ಸಮಸ್ಯೆ ಕಡಿಮೆ: ಗೋಹಾಲಿನ ಅಲರ್ಜಿ ಇರುವವರಿಗೆ, ಕೆಲವು ಸಂದರ್ಭಗಳಲ್ಲಿ ಕತ್ತೆ ಹಾಲು ಪರ್ಯಾಯವಾಗಬಹುದು. ಆದರೆ ವೈದ್ಯರ ಸಲಹೆ ಅಗತ್ಯ.
- ಬೆಲೆ ಮತ್ತು ಲಭ್ಯತೆ: ಇದೊಂದು ದುಬಾರಿ ಹಾಲು. ಲಭ್ಯತೆ ಕಡಿಮೆ, ಉತ್ಪಾದನೆವೂ ಕಡಿಮೆ. ಆದ್ದರಿಂದ ಎಲ್ಲರಿಗೂ ಇದು ಸುಲಭವಲ್ಲ.
ಎಚ್ಚರಿಕೆ ಬೇಕೇ?
ಹೌದು. ಲ್ಯಾಕ್ಟೋಸ್ ಹೆಚ್ಚಿರುವುದರಿಂದ ಲ್ಯಾಕ್ಟೋಸ್ ಇಂಟಾಲರೆನ್ಸ್ ಇರುವವರು ಕುಡಿಯಬಾರದು. ಜೊತೆಗೆ ಯಾವುದೇ ಹಾಲಿನಂತೆ, ಮಿತವಾಗಿ ಮಾತ್ರ ಸೇವಿಸಬೇಕು.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

