Saturday, December 27, 2025

ಸೌಮ್ಯ ಸ್ವಭಾವದ ‘ಭೀಮ’ನಿಗೆ ಕಿರಿಕಿರಿ ನೀಡಬೇಡಿ: ಅರಣ್ಯ ಇಲಾಖೆಯಿಂದ ಖಡಕ್ ವಾರ್ನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಸನ ಜಿಲ್ಲೆಯ ಮಲೆನಾಡು ಭಾಗದ ಗ್ರಾಮಗಳಲ್ಲಿ ಸಂಚರಿಸುತ್ತಿರುವ ಕಾಡಾನೆ ಭೀಮ, ತನ್ನ ಶಾಂತ ಸ್ವಭಾವದಿಂದ ಜನರ ಗಮನ ಸೆಳೆದಿದ್ದಾನೆ. ಆದರೆ, ಆನೆಯನ್ನು ಹತ್ತಿರದಿಂದ ನೋಡಲು, ಫೋಟೋ ಮತ್ತು ವಿಡಿಯೋ ತೆಗೆದುಕೊಳ್ಳಲು ಜನರು ಮುಗಿಬೀಳುತ್ತಿರುವುದು ಭೀಮನ ನೆಮ್ಮದಿಗೆ ಭಂಗ ತರುತ್ತಿದೆ.

ಹಾಸನ ಡಿಎಫ್‌ಓ ಸೌರಭ್‌ಕುಮಾರ್ ಅವರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಈ ಕೆಳಗಿನ ಪ್ರಮುಖ ಅಂಶಗಳನ್ನು ತಿಳಿಸಿದ್ದಾರೆ.

ಎಲಿಫೆಂಟ್ ಟಾಸ್ಕ್ ಫೋರ್ಸ್ ತಂಡವು 24 ಗಂಟೆಗಳ ಕಾಲ ಭೀಮನ ಚಲನವಲನದ ಮೇಲೆ ಕಣ್ಣಿಟ್ಟಿದೆ. ವನ್ಯಜೀವಿ ಸಂರಕ್ಷಣೆ ಕಾಯ್ದೆ 1972ರ ಅಡಿಯಲ್ಲಿ (ಸೆಕ್ಷನ್ 216), ಕಾಡುಪ್ರಾಣಿಗಳಿಗೆ ತೊಂದರೆ ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಇನ್ಮುಂದೆ ಯಾರು ಭೀಮನ ಹತ್ತಿರ ಹೋಗಿ ವಿಡಿಯೋ ಚಿತ್ರೀಕರಣ ಮಾಡುತ್ತಾರೋ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು.

“ಕಾಡುಪ್ರಾಣಿ ಯಾವಾಗಲೂ ಕಾಡುಪ್ರಾಣಿಯೇ”. ಅದರ ಸ್ವಭಾವ ಯಾವಾಗ ಬದಲಾಗುತ್ತದೆ ಎಂದು ಹೇಳಲಾಗದು. ಹಾಗಾಗಿ ಜನರು ತಮ್ಮ ಪ್ರಾಣ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕು ಮತ್ತು ಆನೆಗೆ ಅನಾವಶ್ಯಕ ತೊಂದರೆ ನೀಡಬಾರದು ಎಂದು ಅಧಿಕಾರಿಗಳು ವಿನಂತಿಸಿದ್ದಾರೆ.

ಸಾರ್ವಜನಿಕರಿಗೆ ಮನವಿ: ETF ಸಿಬ್ಬಂದಿ ಭೀಮನನ್ನು ಟ್ರ್ಯಾಕ್ ಮಾಡುತ್ತಿದ್ದು, ಸಾರ್ವಜನಿಕರು ಅಂತರ ಕಾಯ್ದುಕೊಳ್ಳಬೇಕು. ನಿಯಮ ಮೀರಿ ವರ್ತಿಸುವವರ ವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮ ಕೈಗೊಳ್ಳುವುದು ಖಚಿತವಾಗಿದೆ.

error: Content is protected !!