March 22, 2026
Sunday, March 22, 2026
spot_img

ದೇಶದ ಮರ್ಯಾದೆ ಹರಾಜು ಹಾಕಬೇಡಿ: ಕಾಂಗ್ರೆಸ್ ವಿರುದ್ಧ ಹುಬ್ಬಳ್ಳಿಯಲ್ಲಿ ಕೇಸರಿ ಪಡೆ ರಣಕಹಳೆ!

ಹೊಸದಿಗಂತ ಹುಬ್ಬಳ್ಳಿ:

ಇಲ್ಲಿಯ ವಿಶ್ವೇಶ್ವರ ನಗರದ ಉಪ ಕಾರಾಗೃಹದಲ್ಲಿ ಖೈದಿಗಳಿಗೆ ಗಾಂಜಾ ಸರಬರಾಜು ಆಗುತ್ತಿದೆ ಎಂಬ ವಿಡಿಯೋ ವೈರಲ್ ಆದ ಹಿನ್ನೆಲೆ ಉತ್ತರ ವಲಯ ಕಾರಾಗೃಹ ಡಿಐಜಿ ಟಿ.ಪಿ. ಶೇಷ ಅವರು ಕಾರಾಗೃಹಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಉಪನಗರ ಕಾರಾಗೃಹದ ಸಿಬ್ಬಂದಿಯಿಂದ ಈ ಘಟನೆ, ವಿಡಿಯೋ ವೈರಲ್ ಕುರಿತು ಅಗತ್ಯ ಮಾಹಿತಿ ಪಡೆದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೈರಲ್ ಆದ ವಿಡಿಯೋ 2025 ಡಿಸೆಂಬರ್‌ನಲ್ಲಿ ಮಾಡಿರುವುದಾಗಿದೆ. ಕೆಲವರು ದುರುದ್ದೇಶದಿಂದ ಈಗ ವೈರಲ್ ಮಾಡಿ ಕಾರಾಗೃಹ ಇಲಾಖೆ ಹೆಸರು ಕೆಡಿಸುವ ಕೆಲಸ ಮಾಡಿದ್ದಾರೆ. ಕಾರಾಗೃಹಗಳ ಸುಧಾರಣೆ ತರಲು ಡಿಜಿಪಿ ಅಲೋಕಕುಮಾರ ಅವರ ನೇತೃತ್ವದಲ್ಲಿ ಹಲವಾರು ಕ್ರಮ ಕೈಗೊಳ್ಳಲಾಗುತ್ತಿದ್ದು, ಹಿನ್ನಡೆಯಾಗಲಿ ಎಂಬ ಉದ್ದೇಶದಿಂದ ಈ ಕೃತ್ಯ ವೆಸಗಿದ್ದಾರೆ ಎಂದರು.

ಈ ಘಟನೆ ಸಂಬಂಧಿಸಿ ನಮ್ಮ ಸಿಬ್ಬಂದಿ ಕರ್ತವ್ಯ ಲೋಕ ಕಂಡು ಬಂದಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ವಿಡಿಯೋ ಪ್ರಕರಣದಲ್ಲಿ ಭಾಗಿಯಾದ 10 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಬಹುಶಃ ಮೊಬೈಲ್ ಜೈಲ್ ಹಿಂದಿನ ಗೋಡೆಯಿಂದ ಯಾರೋ ಎಸೆದಿರಬಹುದು ಎಂದು ತಿಳಿಸಿದರು.

ಜೈಲಿನಲ್ಲಿ 132 ಜನ ಖೈದಿಗಳಿದ್ದು, ಕೇವಲ ೩೫ ಜನ ಜೈಲು ಸಿಬ್ಬಂದಿ ಇದ್ದಾರೆ. ಸಿಬ್ಬಂದಿ ಕೊರತೆ ಇದೆ. ಈ ಜೈಲಿಗೆ 80 ಜನ ಸಿಬ್ಬಂದಿ ಅವಶ್ಯಕತೆ ಇದೆ. ಮೊಬೈಲ್ ನಿಂದ ವಿಡಿಯೋ ಮಾಡಿದೆ ಎನ್ನಲು ಸಾಧ್ಯವಿಲ್ಲ. ಪೆನ್ನ್ ಕ್ಯಾಮಾರ್ ದಿಂದ ಮಾಡಿರಬಹುದು. ೧೦ ಜನರ ಆರೋಪಿಗಳ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.

ಪ್ರಜ್ವಲ್ ಎಂಬ ಆರೋಪಿ ವಿಡಿಯೋ ವೈರಲ್ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆತ ಜೈಲಿನಲ್ಲಿ ಗಲಾಟೆ ಮಾಡುವ ಮಾಹಿತಿ ಬಂದಿದ್ದರಿಂದ ಬೇರೆ ಜಿಲ್ಲೆಯ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಇಲಾಖೆಗೆ ಕೆಟ್ಟು ಹೆಸರು ತರವು ಉದ್ದೇಶದಿಂದ ಮಾಡಿದ್ದಾರೆ ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !