Thursday, January 8, 2026

ಸುಮ್ನೆ ಬಿಡಲ್ಲ! ಹಾವಿಂದ ನಿಮ್ಮನ್ನು ಕಚ್ಚಿಸ್ತೀನಿ: ಪೊಲೀಸ್‌ಗೆ ಅವಾಝ್‌ ಹಾಕಿದ ಆಟೋ ಡ್ರೈವರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕುಡಿದು ಗಾಡಿ ಓಡಿಸುತ್ತಿದ್ದ ಆಟೋ ಡ್ರೈವರ್‌ನ್ನು ತಡೆದಿದ್ದಕ್ಕೆ ಚಾಲಕ ಪೊಲೀಸರಿಗೆ ಅವಾಝ್‌ ಹಾಕಿದ್ದಾನೆ. ನಿಮ್ಮನ್ನು ಸಾಯಿಸ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ಹೈದರಾಬಾದ್‌ನ ಚಂದ್ರಾಯಣಗುಟ್ಟ ಕ್ರಾಸ್‌ರೋಡ್ಸ್‌ನ ಬಳಿ ಶನಿವಾರ ರಾತ್ರಿ ಅಂಥದ್ದೇ ಒಂದು ಘಟನೆ ನಡೆದಿದೆ. ಕುಡಿದು ವಾಹನ ಚಲಾಯಿಸಿದ್ದಕ್ಕೆ ಸಂಚಾರ ಪೊಲೀಸ್​ ಅಧಿಕಾರಿ ವ್ಯಕ್ತಿಯೊಬ್ಬನ ಆಟೋ ಜಪ್ತಿ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಆತ ಹಾವು ಹಿಡಿದು ತಂದು ಮೈಮೇಲೆ ಬಿಸಾಡುವುದಾಗಿ ಪೊಲೀಸ್​​ ಅಧಿಕಾರಿಗೇ ಬೆದರಿಸಿದ್ದಾನೆ. ಇದರ ವಿಡಿಯೋ ವೈರಲ್​ ಆಗಿದೆ.

ಟ್ರಾಫಿಕ್ ಇನ್ಸ್‌ಪೆಕ್ಟರ್ ಎಂ.ಎ. ಕರೀಮ್ ಅವರು ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದಾಗ, ಪಹಾಡಿ ಷರೀಫ್ ಚಾರ್ಮಿನಾರ್ ಮಸೀದಿ ಪ್ರದೇಶದ ಆಟೋ ಚಾಲಕ ಸೈಯದ್ ಇರ್ಫಾನ್ (23) ಎಂಬಾತನನ್ನು ತಪಾಸಣೆ ನಡೆಸಿದಾಗ, ಆತ ಕುಡಿದಿದ್ದು ಗೊತ್ತಾಗಿದೆ. ಆತನ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು ಆಟೋವನ್ನು ವಶಪಡಿಸಿಕೊಂಡಿದ್ದಾರೆ. ಇರ್ಫಾನ್ ಆರಂಭದಲ್ಲಿ ತನ್ನ ವಿರುದ್ಧ ಪ್ರಕರಣ ದಾಖಲಿಸದಂತೆ ವಿನಂತಿಸಿದ್ದಾನೆ. ಪೊಲೀಸರು ನಿರಾಕರಿಸಿದಾಗ, ಆಟೋದಲ್ಲಿ ತನ್ನ ವಸ್ತುಗಳಿವೆ, ಅವನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾನೆ.

ಇದನ್ನೂ ಓದಿ: ರೈಲಿನ ಮೇಲೆ ಹತ್ತಿ ನಿಂತು ನ್ಯೂಸೆನ್ಸ್‌ ಕ್ರಿಯೇಟ್‌ ಮಾಡಿದ ಯುವಕ, ವಿಡಿಯೋ ವೈರಲ್‌

ಬಳಿಕ, ಆಟೋದಲ್ಲಿನ ಚೀಲದಿಂದ ಹಾವು ಹೊರತೆಗೆದು ಅದನ್ನು ತನ್ನ ಕೈಗೆ ಸುತ್ತಿಕೊಂಡು ಪೊಲೀಸ್​ ಅಧಿಕಾರಿ ಬಳಿಗೆ ಬಂದಿದ್ದಾನೆ. ಜಪ್ತಿ ಮಾಡಿದ ಆಟೋ ವಾಪಸ್​ ಕೊಡದಿದ್ದರೆ, ಹಾವನ್ನು ಮೈಮೇಲೆ ಹಾಕಿ ಕಚ್ಚಿಸುವೆ ಎಂದು ಬೆದರಿಸಿದ್ದಾನೆ. ಕೈಗೆ ಹಾವನ್ನು ಸುತ್ತಿಕೊಂಡು ಗಲಾಟೆ ಮಾಡಿದ್ದಾನೆ. ಹಾವು ಕಂಡು ಪೊಲೀಸರು ಗಾಬರಿಗೊಂಡಿದ್ದಾರೆ. ನಂತರ ಕುಡುಕ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಹಾವು ತಂದು ಬೆದರಿಸಿ ಆರೋಪದ ಮೇಲೆ ಸಂಚಾರ ಎಸ್‌ಐ ದೂರು ನೀಡಿದ್ದಾರೆ. ಈ ಮೇರೆಗೆ ಇರ್ಫಾನ್‌ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು, ಆತನನ್ನು ಬಂಧಿಸಿದ್ದಾರೆ. ತಾನು ಇದನ್ನು ಮದ್ಯದ ಅಮಲಿನಲ್ಲಿ ಮಾಡಿದ್ದೇನೆ. ನನ್ನಿಂದ ತಪ್ಪಾಗಿದೆ. ತಾನು ತೋರಿಸಿದ್ದು ಸತ್ತ ಹಾವು. ಅದು ದಾರಿಯಲ್ಲಿ ಬಿದ್ದಿದ್ದಾಗ ತನ್ನ ಸಹೋದರಿಯರನ್ನು ಹೆದರಿಸಲು ಅದನ್ನು ಎತ್ತಿಕೊಂಡು ಬಂದಿದ್ದೆ ಎಂದು ತಿಳಿಸಿದ್ದಾನೆ.

error: Content is protected !!