April 11, 2026
Saturday, April 11, 2026
spot_img

ಅಸ್ಸಾಂ ರಾಜಕೀಯಕ್ಕೆ ಗೊಗೊಯ್ ಕುಟುಂಬವನ್ನು ಎಳೆದು ತರಬೇಡಿ: ಹಿಮಂತ್ ಬಿಸ್ವಾಸ್ ವಿರುದ್ಧ ಪ್ರಿಯಾಂಕಾ ವಾದ್ರಾ ಕಿಡಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಗುವಾಹಟಿಯ ಹೊರವಲಯದಲ್ಲಿರುವ ಸೋನಾಪುರದಲ್ಲಿ ಸಿಎಂ ಹಿಮಂತ್ ಬಿಸ್ವಾಸ್ ಶರ್ಮಾ ವಿರುದ್ಧ ಕಿಡಿಕಾರಿದ್ದು, ಅಸ್ಸಾಂ ರಾಜಕೀಯಕ್ಕೆ ಗೌರವ್ ಗೊಗೊಯ್ ಅವರ ಕುಟುಂಬ ಮತ್ತು ಮಕ್ಕಳನ್ನು ಎಳೆದು ತರುತ್ತಿರುವುದು ಸರಿಯಲ್ಲ ಎಂದು ಹರಿಹಾಯ್ದಿದ್ದಾರೆ.

‘ಜುಬೀನ್ ಖೇತ್ರಾ’ದಲ್ಲಿ ದಿವಂಗತ ಗಾಯಕ ಜುಬೀನ್ ಗಾರ್ಗ್ ಅವರಿಗೆ ಗೌರವ ಸಲ್ಲಿಸಿದ ನಂತರ ಮಾತನಾಡಿದ ಪ್ರಿಯಾಂಕಾ ವಾದ್ರಾ, ಗಾಯಕ ಜುಬೀನ್ ತಮ್ಮ ಜೀವನದುದ್ದಕ್ಕೂ ಪ್ರೀತಿಯ ಸಂದೇಶವನ್ನು ಹರಡಿದರು ಎಂದು ಹೇಳಿದರು.

ಪಾಸಿಟಿವ್ ರಾಜಕೀಯ ಮಾಡುವವರು ಮತ್ತು ಇನ್ನೊಬ್ಬರು ಧ್ರುವೀಕರಣ ಮಾಡುವ ಎಂದು ಎರಡು ರೀತಿಯ ನಾಯಕರಿದ್ದಾರೆ. ಅದರಲ್ಲಿ ಗೌರವ್ ಗೊಗೊಯ್ ಒಬ್ಬ ಸಕಾರಾತ್ಮಕ ವ್ಯಕ್ತಿ, ಮತ್ತು ರಾಜಕೀಯದಲ್ಲಿ ಸಕಾರಾತ್ಮಕತೆಯನ್ನು ತರಲು ಬಯಸುತ್ತಾರೆ, ಅದಕ್ಕಾಗಿಯೇ ಅವರ ಮೇಲೆ ದಾಳಿಗಳು ನಡೆಯುತ್ತಿವೆ. ಅಸ್ಸಾಂನ ಜನರು ಇದನ್ನು ಅರ್ಥಮಾಡಿಕೊಳ್ಳುತ್ತಾರೆ. ಆದರೆ ಗೌರವ್ ಮತ್ತು ಅವರ ಕುಟುಂಬದ ಮೇಲಿನ ದಾಳಿಗಳು ತಪ್ಪು ರಾಜಕೀಯ. ಒಬ್ಬ ರಾಜಕೀಯ ನಾಯಕನ ಕುಟುಂಬ ಮತ್ತು ಮಕ್ಕಳ ಮೇಲೆ ಯಾರೂ ದಾಳಿ ಮಾಡಬಾರದು ಎಂದು ವಾದ್ರಾ ಹೇಳಿದರು.

ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರ ಪತ್ನಿ ಪಾಕಿಸ್ತಾನ ಮತ್ತು ಅದರ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆರೋಪಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !