ಬೆಳಗಿನ ಸಮಯದಲ್ಲಿ ದೇಹ ಅತ್ಯಂತ ಸಂವೇದನಾಶೀಲವಾಗಿರುತ್ತದೆ. ರಾತ್ರಿ ಪೂರ್ತಿ ಜೀರ್ಣಾಂಗ ವಿಶ್ರಾಂತಿ ಪಡೆದಿರುವುದರಿಂದ, ಮೊದಲಿಗೆ ಹೊಟ್ಟೆಗೆ ಹೋಗುವ ಆಹಾರವು ನೇರ ಪರಿಣಾಮ ಬೀರುತ್ತದೆ. ಆದರೂ, ಹಲವರು ಸೌಕರ್ಯ ಅಥವಾ ಅಭ್ಯಾಸದ ಕಾರಣಕ್ಕೆ ತಪ್ಪು ಆಹಾರಗಳಿಂದ ದಿನವನ್ನು ಆರಂಭಿಸುತ್ತಾರೆ. ಖಾಲಿ ಹೊಟ್ಟೆಯಲ್ಲಿ ಕೆಲವು ಆಹಾರಗಳು ಜೀರ್ಣಕ್ರಿಯೆಯನ್ನು ಅಸ್ತವ್ಯಸ್ತಗೊಳಿಸಿ ದಿನವಿಡೀ ಅಸಹಜತೆ ಉಂಟುಮಾಡಬಹುದು.
- ಚಹಾ, ಕಾಫಿ ಮತ್ತು ಹಾಲು: ಬೆಳಗ್ಗೆ ಎದ್ದ ತಕ್ಷಣ ಕಾಫಿ–ಚಹಾ ಕುಡಿಯುವುದು ಸಾಮಾನ್ಯ. ಆದರೆ ಇವೆಲ್ಲವೂ ಆಮ್ಲೀಯ ಪದಾರ್ಥಗಳು. ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಎದೆ ಉರಿ, ಆಮ್ಲೀಯತೆ, ಅಜೀರ್ಣ ಮತ್ತು ದೀರ್ಘಾವಧಿಯಲ್ಲಿ ಅಲ್ಸರ್‌ಗೆ ಕಾರಣವಾಗಬಹುದು. ಹಾಲು ಕೂಡ ಕೆಲವರಿಗೆ ಹೊಟ್ಟೆ ಉಬ್ಬರ ಮತ್ತು ಗ್ಯಾಸಿನ ಸಮಸ್ಯೆ ಉಂಟುಮಾಡುತ್ತದೆ. ಇವುಗಳ ಬದಲಿಗೆ ಬೆಚ್ಚಗಿನ ನೀರು, ಶುಂಠಿ ನೀರು ಅಥವಾ ತೆಂಗಿನ ನೀರಿನಿಂದ ದಿನ ಆರಂಭಿಸುವುದು ಉತ್ತಮ.
- ಹುರಿದ ತಿಂಡಿಗಳು: ಪೂರಿ, ವಡೆ, ಬಜ್ಜಿ ಮೊದಲಾದ ಹುರಿದ ಪದಾರ್ಥಗಳು ಬೆಳಗ್ಗೆ ಹೊಟ್ಟೆಗೆ ಭಾರವಾಗುತ್ತವೆ. ಅಧಿಕ ಎಣ್ಣೆ ಹೊಟ್ಟೆಯ ಆಮ್ಲೀಯತೆ ಹೆಚ್ಚಿಸಿ, ದಿನವಿಡೀ ಕಿರಿಕಿರಿ ಉಂಟುಮಾಡುತ್ತದೆ. ಇವುಗಳಿಗೆ ಬದಲಾಗಿ ಇಡ್ಲಿ , ರಾಗಿ ದೋಸೆ, ಉಪ್ಪಿಟ್ಟು ಮುಂತಾದ ಆವಿಯಲ್ಲಿ ಬೇಯಿಸಿದ ಆಹಾರಗಳು ಉತ್ತಮ.
- ಬಿಸ್ಕಟ್, ಬ್ರೆಡ್, ಜ್ಯಾಮ್ ಮತ್ತು ಬೇಕರಿ ಐಟಂಗಳು: ಮೈದಾ ಮತ್ತು ಸಕ್ಕರೆ ತುಂಬಿರುವ ಇವುಗಳು ಖಾಲಿ ಹೊಟ್ಟೆಯಲ್ಲಿ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಏರಿ ತಕ್ಷಣ ಕುಸಿಯುವಂತೆ ಮಾಡುತ್ತವೆ. ಶಕ್ತಿ ಅಸ್ಥಿರವಾಗುತ್ತದೆ ಮತ್ತು ಬೇಗನೆ ಹಸಿವು ಕಾಣಿಸುತ್ತದೆ. ಇವುಗಳ ಬದಲಾಗಿ ಸಂಪೂರ್ಣ ಧಾನ್ಯದ ರೊಟ್ಟಿ, ಸಿರಿಧಾನ್ಯ ಅಥವಾ ಹಣ್ಣುಗಳು ಉತ್ತಮ ಆಯ್ಕೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

