Tuesday, December 16, 2025

ನಿಯಮ ಮರೆಯುವಂತಿಲ್ಲ! ಟ್ರಾಫಿಕ್ ಪೊಲೀಸ್ರು ಹೆಲ್ಮೆಟ್, ಸೀಟ್ ಬೆಲ್ಟ್ ಹಾಕೋದು ಕಡ್ಡಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ಸೀಟ್ ಬೆಲ್ಟ್ ಮತ್ತು ಹೆಲ್ಮೆಟ್ ಧರಿಸುವುದು​ ಕಡ್ಡಾಯ ಎಂದು ಆದೇಶ ಹೊರಡಿಸಲಾಗಿದೆ. ಕೇವಲ ಬೈಕ್​​ ಕಾರು ಓಡಿಸುವವರು ಮಾತ್ರವಲ್ಲದೇ ಸಹ ಪ್ರಯಾಣಿಕರು ಕೂಡ ಸೀಟ್​ ಬೆಲ್ಟ್​ ಹಾಕಿಕೊಳ್ಳುವುದು ಮತ್ತು ಹಿಂಬದಿ ಹೆಲ್ಮೆಟ್​ ಧರಿಸುವುದನ್ನ ಟ್ರಾಫಿಕ್​ ಪೊಲೀಸರುಕಡ್ಡಾಯಗೊಳಿಸಿದ್ದಾರೆ. ಆದ್ರೆ, ಹೊಸ ಹೊಸ ನಿಯಮಗಳನ್ನ ಜಾರಿಗೊಳಿಸುವ ಟ್ರಾಫಿಕ್​​ ಪೊಲೀಸರೇ ಈ ನಿಯಮಗಳನ್ನ ಕೆಲವೊಮ್ಮೆ ಪಾಲಿಸುವುದಿಲ್ಲ. ಇದೀಗ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿರುವ ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಸ್ಪಷ್ಟ ಸಂದೇಶ ನೀಡಿದ್ದಾರೆ.

ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರೇ ಕೆಲವೊಮ್ಮೆ ನಿಯಮಗಳನ್ನ ಮರೆತಿರುವಂತೆ ಕಾಣಿಸುತ್ತಿದೆ. ಹೀಗಾಗಿ, ಟ್ರಾಫಿಕ್ ಪೊಲೀಸರು ಕಡ್ಡಾಯವಾಗಿ ಸೀಟ್ ಬೆಲ್ಟ್ ಮತ್ತು ಹೆಲ್ಮೆಟ್ ಧರಿಸುವಂತೆ ಸೂಚನೆ ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಅವರು ಸ್ಪಷ್ಟ ಸೂಚನೆ ನೀಡಿದ್ದಾರೆ.

ಸಂಚಾರ ನಿಯಮಗಳನ್ನು ಪಾಲನೆ ಮಾಡುವುದು ಕೇವಲ ನಾಗರೀಕರಿಗೆ ಅನ್ವಯಿಸುವುದಲ್ಲದೇ, ಕಾನೂನಿನ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳು ಸಂಚಾರ ನಿಯಮಗಳಿಗೆ ಬಹಳ ಪ್ರಾಮುಖ್ಯತೆಯನ್ನು ನೀಡಬೇಕಾಗಿರುತ್ತದೆ. ಕಾನೂನು ಜಾರಿಗೊಳಿಸುವ ಸಂಚಾರ ಪೊಲೀಸರೇ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ, ಸಂಚಾರ ನಿಯಮ ಪಾಲಿಸಿ ಎಂದು ಸಾರ್ವಜನಿಕರಿಗೆ ಹೇಳುವ ಯಾವುದೇ ಹಕ್ಕು ಪೊಲೀಸರಿಗೆ `ಇಲ್ಲದಂತಾಗುವುದಲ್ಲದೇ, ಸಾರ್ವಜನಿಕರಿಂದ ಟೀಕೆಗಳಿಗೆ ಗುರಿಯಾಗಬೇಕಾಗುತ್ತದೆ.

error: Content is protected !!