Saturday, October 11, 2025

ವಾಟ್ಸಾಪ್​​ನಲ್ಲಿ ಮದುವೆ ಇನ್ವಿಟೇಶನ್ ಬಂತು ಅಂತ ಓಪನ್ ಮಾಡ್ಲಿಕೆ ಹೋಗ್ಬೇಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಂತ್ರಜ್ಞಾನ ತ್ವರಿತವಾಗಿ ಬದಲಾಗುತ್ತಿರುವಂತೆ, ಸೈಬರ್ ಅಪರಾಧಿಗಳೂ ಜನರನ್ನು ವಂಚಿಸಲು ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ಇತ್ತೀಚೆಗೆ ಗುರುಗ್ರಾಮದಲ್ಲಿ ವಾಟ್ಸಾಪ್‌ನಲ್ಲಿ ಬಂದ ಮದುವೆ ಆಮಂತ್ರಣ ಲಿಂಕ್ ಓಪನ್ ಮಾಡುವ ಮೂಲಕ ವ್ಯಕ್ತಿಯೊಬ್ಬ 97 ಸಾವಿರ ರೂ. ಕಳೆದುಕೊಂಡ ಘಟನೆ ನಡೆದಿದೆ.

ವಿನೋದ್ ಕುಮಾರ್, ವಿಷ್ಣು ಗಾರ್ಡನ್ ನಿವಾಸಿ, ಸೆಪ್ಟೆಂಬರ್ 4ರಂದು ಅಪರಿಚಿತ ಸಂಖ್ಯೆಯಿಂದ ಬಂದ ಮದುವೆ ಆಮಂತ್ರಣ ಲಿಂಕ್‌ನ್ನು ಕ್ಲಿಕ್ ಮಾಡಿದಾಗ, ಅವರ ಫೋನ್ ಹ್ಯಾಕ್ ಆಗಿ ಮೂರು ಅನಧಿಕೃತ ವಹಿವಾಟುಗಳು ನಡೆದು ಅವರ ಬ್ಯಾಂಕ್ ಖಾತೆಯಿಂದ 97,000 ರೂ. ಕಳೆದುಕೊಂಡರು.

ಗುರುಗ್ರಾಮ ಪೊಲೀಸ್ ಸೈಬರ್ ಕ್ರೈಂ ಘಟಕವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು ಅಪರಿಚಿತ ಮೂಲಗಳಿಂದ ಬಂದ ಲಿಂಕ್‌ಗಳನ್ನು, ಅವು ಎಷ್ಟೇ ಖಚಿತವಾಗಿ ಅಥವಾ ಮನವರಿಕೆಯಿಂದ ಕಾಣಿಸಿಕೊಂಡರೂ, ಒಮ್ಮೆ ಕೂಡ ಕ್ಲಿಕ್ ಮಾಡಬಾರದು.

error: Content is protected !!