ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಷಬ್ ಶೆಟ್ಟಿ ಅವರು ನಿರ್ದೇಶಿಸಿ ನಾಯಕ ನಟನಾಗಿ ನಟಿಸಿದ ‘ಕಾಂತಾರ: ಚಾಪ್ಟರ್ 1’ ಚಿತ್ರ ಯಶಸ್ಸು ಕಂಡಿದೆ.ಇದರಲ್ಲಿ ಕರಾವಳಿ ಭಾಗದ ಜನರ ದೈವದ ನಂಬಿಕೆ, ಆಚರಣೆಯನ್ನು ಜಗತ್ತಿಗೆ ತೋರಿಸಿದ್ದಾರೆ.
ಚಿತ್ರದ ಯಶಸ್ಸಿನ ನಂತರ ಅವರು ತಮ್ಮ ಪತ್ನಿ, ಮಕ್ಕಳು ಹಾಗೂ ಕಾಂತಾರ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಜೊತೆಗೆ ವಾರಾಹಿ ಪಂಜುರ್ಲಿ ದೈವಕ್ಕೆ ಮಂಗಳೂರಿನಲ್ಲಿ ಹರಕೆಯ ನೇಮೋತ್ಸವ ಸಲ್ಲಿಸಲಾಯಿತು. ಈ ವೇಳೆ ಅವರಿಗೆ ದೈವದ ಅಭಯ ಸಿಕ್ಕಿದೆ.
ದೈವವು ರಿಷಬ್ ಶೆಟ್ಟಿಯನ್ನು ಅಪ್ಪಿ ಆಲಂಗಿಸಿದೆ. ‘ಕಣ್ಣೀರು ಸುರಿಸಬೇಡ ನಿನ್ನ ಹಿಂದೆ ನಾನಿದ್ದೇನೆ’ ಎಂದು ದೈವ ಅಭಯ ನೀಡಿದ್ದು, ರಿಷಬ್ ಖುಷಿಯಾಗಿದ್ದಾರೆ. ರಿಷಬ್ ಶೆಟ್ಟಿ ಮಡಿಲಲ್ಲಿ ಮಲಗಿ ಪಂಜುರ್ಲಿ ಮಮಕಾರ ತೋರಿದೆ. ಮಂಗಳೂರಿನ ಬಾರೆಬೈಲ್ ವಾರಾಯಿ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ನೇಮ ನಡೆದಿದೆ.

