Wednesday, December 10, 2025

ಡಿಎಂಕೆ ಸರ್ಕಾರವನ್ನು ನಂಬಬೇಡಿ, ಜನರಿಗೆ ಮೋಸ ಮಾಡುವುದೇ ಕೆಲಸ: ಪುದುಚೇರಿಯಲ್ಲಿ ನಟ ವಿಜಯ್ ವಾಗ್ದಾಳಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕರೂರು ದುರಂತದ ಬಳಿಕ ಮೊದಲ ಬಾರಿಗೆ ‘ಪುದುಚೇರಿ ಮಕ್ಕಳ್ ಸಂತಿಪ್ಪು ನೀದಿ ಪಯಣಂ’ ರ‍್ಯಾಲಿ ಉಪ್ಪಲಂನ ಎಕ್ಸ್‌ಪೋ ಮೈದಾನದಲ್ಲಿ ಯಾರ್ಲಿಯನ್ನು ಆಯೋಜಿಸಲಾಗಿತ್ತು. ಇಲ್ಲಿ ಮಾತನಾಡಿದ ನಟ ವಿಜಯ್‌ ಡಿಎಂಕೆ ಮೇಲೆ ಕಿಡಿ ಕಾರಿದರು.

ಪುದುಚೇರಿ ಸರ್ಕಾರ ಪಕ್ಷಪಾತವಿಲ್ಲದೆ ನಮಗೆ ಭದ್ರತೆ ನೀಡಿದೆ. ತಮಿಳುನಾಡಿನ ಡಿಎಂಕೆ ಸರ್ಕಾರ ಇದನ್ನು ನೋಡಿ ಕಲಿಯಬೇಕು.ಎಂದು ಪುದುಚೇರಿ ಮುಖ್ಯಮಂತ್ರಿ ಎನ್. ರಂಗಸ್ವಾಮಿ ಅವರ ಆಡಳಿತವನ್ನು ವಿಜಯ್‌ ಹಾಡಿ ಹೊಗಳಿದರು.

ಡಿಎಂಕೆ ಸರ್ಕಾರ ಈಗ ಬುದ್ಧಿ ಕಲಿಯುವುದಿಲ್ಲ, 2026ರ ಚುನಾವಣೆಯಲ್ಲಿ ಜನರೇ ಅವರಿಗೆ ಪಾಠ ಕಲಿಸುತ್ತಾರೆ. ವಿಜಯ್‌ ತಮಿಳುನಾಡಲ್ಲಿ ಮಾತ್ರ ಮಾತನಾಡುತ್ತಾರೆ ಎಂದು ಭಾವಿಸಬೇಡಿ. ನಾನು ಪುದುಚೇರಿ ಪರವಾಗಿಯೂ ಇದ್ದೇನೆ ಎಂದು ವಿಜಯ್‌ ಹೇಳಿದ್ದಾರೆ. ಜನರು ಡಿಎಂಕೆ ಸರ್ಕಾರವನ್ನು ನಂಬಬಾರದು, ಅವರು ಜನರನ್ನು ಮೋಸಗೊಳಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ತಮಿಳಿನ ಡಿಎಂಕೆ ಆಡಳಿತವು ನಿಷ್ಪಕ್ಷಪಾತ ಪುದುಚೇರಿ ಸರ್ಕಾರದಿಂದ ಕಲಿತರೆ ಒಳ್ಳೆಯದು, ಆದರೆ ಅವರು ಈಗ ಕಲಿಯುವುದಿಲ್ಲ ಎಂದರು.

ಕೇಂದ್ರವನ್ನು ಗುರಿಯಾಗಿಸಿಕೊಂಡು ಮಾತನಾಡಿದ ವಿಜಯ್, ಪುದುಚೇರಿಗೆ ರಾಜ್ಯ ಸ್ಥಾನಮಾನ ನೀಡಬೇಕೆಂಬ ದೀರ್ಘಕಾಲದ ಬೇಡಿಕೆಯನ್ನು ಒತ್ತಿ ಹೇಳಿದರು. “ಪುದುಚೇರಿಯ ಅಭಿವೃದ್ಧಿಯಲ್ಲಿ ಕೇಂದ್ರವು ಬೆಂಬಲವಾಗಿ ನಿಂತಿಲ್ಲ ಎಂದು ಹೇಳಿದ್ದಾರೆ.

error: Content is protected !!