March 15, 2026
Sunday, March 15, 2026
spot_img

ಸುಮ್ನೆ ಸುಮ್ನೆ ನೀರು ವೇಸ್ಟ್‌ ಮಾಡ್ಬೇಡಿ! ಕಾವೇರಿ ನೀರು ಪೋಲು ಮಾಡಿದ್ರೆ 5,000 ರೂಪಾಯಿ ದಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಜನರಿಗೆ ಬೇಸಿಗೆಯಲ್ಲಿ ಕಾವೇರಿ ಕುಡಿಯುವ ನೀರಿನ ಅಭಾವ ಆಗದಂತೆ ಜಲಮಂಡಳಿ ಮುನ್ನೆಚ್ಚರಿಕೆ ವಹಿಸಿದೆ. ಇನ್ನೇನು ಬೇಸಿಗೆ ಆರಂಭವಾಗಲಿದ್ದು, ನೀರಿಗೆ ಸಮಸ್ಯೆ ಕಾಣಬಹುದು. ಹೀಗಾಗಿ ನೀರಿನ ಅಭಾವವಿರುವಾಗ ವೇಸ್ಟ್‌ ಮಾಡಿದ್ದು ಕಂಡುಬಂದರೆ ದಂಡ ತಪ್ಪಿದ್ದಲ್ಲ.

ಬೆಂಗಳೂರು ಜಲಮಂಡಳಿ ಬೇಸಿಗೆ ಕಾಲದಲ್ಲಿ ಆಗುವ ನೀರಿನ ಸಮಸ್ಯೆಯನ್ನ ಬಗೆಹರಿಸಲು ಈಗಾಗಲೇ ಅಧಿಕಾರಿಗಳ ಸಭೆ ಮಾಡಿದ್ದು, ನೀರಿನ ಸಮಸ್ಯೆ ಆಗುವ ಭಾಗದಲ್ಲಿ ಟ್ಯಾಂಕರ್‌ ವ್ಯವಸ್ಥೆ ಮಾಡಲು ಪ್ಲ್ಯಾನ್‌ ಮಾಡಿಕೊಂಡಿದೆ. ಅದರ ಜೊತೆಗೆ ನೀರಿನ ಅಭಾವ ಆಗೋದು ಡೌಟ್. ಒಂದು ವೇಳೆಯಾದ್ರೂ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳೋದಕ್ಕೆ ಜಲಮಂಡಳಿ ಮುಂದಾಗಿದೆ.

ಕಾವೇರಿ ನೀರಿನಲ್ಲಿ ಬೈಕ್, ಕಾರು ತೊಳೆಯೋದು, ನೀರನ್ನ ಬೇಕಾಬಿಟ್ಟಿ ಪೋಲು ಮಾಡಿದ್ರೇ ಜಲಮಂಡಳಿ ದಂಡ ಹಾಕಲು ಕೂಡ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ ವೀಕ್ಷಕರು ಮತ್ತು ಬ್ಲೂಫೋರ್ಸ್‌ ಕೂಡ ಕಾರ್ಯಚರಣೆ ಮಾಡಲಿದೆ. ಜನರು ಜೀವ ಜಲವನ್ನ ವ್ಯರ್ಥ ಮಾಡದೇ ಸರಿಯಾಗಿ ಬಳಕೆ ಮಾಡಿದ್ರೇ ಜಲಕ್ಷಾಮವಾಗೋದು ಕಡಿಮೆ ಜೊತೆಗೆ ದಂಡ ಕಟ್ಟುವ ಪ್ರಮೇಯವೂ ಬರಲ್ಲ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !