February 8, 2026
Sunday, February 8, 2026
spot_img

ನಡುರಸ್ತೆಯಲ್ಲಿ ‘ನಶೆ’ ಏರಿದ ಯುವತಿಯರ ಹೈಡ್ರಾಮಾ: ಕ್ಯಾಬ್ ಚಾಲಕನ ಮೇಲೆ ಹಲ್ಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಬಳಿ ಮದ್ಯದ ಅಮಲಿನಲ್ಲಿ ಇಬ್ಬರು ಯುವತಿಯರು ಸೃಷ್ಟಿಸಿದ ರಂಪಾಟ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಜೆ.ಪಿ.ನಗರ ಮತ್ತು ಕೋರಮಂಗಲ ಮೂಲದ ಲೀಸಾ ಮತ್ತು ಮ್ಯಾಥ್ಯೂ ಎಂಬ ಯುವತಿಯರು ಈ ಘಟನೆಯ ಕೇಂದ್ರಬಿಂದು.

ಖಾಸಗಿ ಹೋಟೆಲ್‌ವೊಂದರಲ್ಲಿ ಪಾರ್ಟಿ ಮುಗಿಸಿ ವಾಪಸ್ ಹೋಗುತ್ತಿದ್ದ ಈ ಯುವತಿಯರು, ತಮ್ಮ ಸ್ಕೂಟಿಯಿಂದ ಮುಂದಿದ್ದ ಕ್ಯಾಬ್‌ಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ಬಗ್ಗೆ ಕ್ಯಾಬ್ ಚಾಲಕ ಅಹ್ಮದ್ ಪ್ರಶ್ನಿಸುತ್ತಿದ್ದಂತೆಯೇ ರೊಚ್ಚಿಗೆದ್ದ ಯುವತಿಯರು, ಆತನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಕೈಗೆ ಚೈನ್ ಸುತ್ತಿಕೊಂಡು ಚಾಲಕನಿಗೆ ಹೊಡೆಯಲು ಯತ್ನಿಸಿದ್ದಲ್ಲದೆ, ಸ್ಥಳದಲ್ಲಿದ್ದ ಸಾರ್ವಜನಿಕರಿಗೂ ಅಸಭ್ಯ ಸನ್ನೆಗಳನ್ನು ತೋರಿಸುತ್ತಾ ನಿಂದಿಸಿದ್ದಾರೆ.

ಇದನ್ನೂ ಓದಿ:

ಸ್ಥಳೀಯರು ಯುವತಿಯರನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದರೂ ಕ್ಯಾರೇ ಎನ್ನದ ಯುವತಿಯರು ತಮ್ಮ ಹೈಡ್ರಾಮಾ ಮುಂದುವರಿಸಿದ್ದಾರೆ. ಸದ್ಯ ಹುಳಿಮಾವು ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು, ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !