ಹೊಸದಿಗಂತ ಡಿಜಿಟಲ್ ಡೆಸ್ಕ್:
ರಫೇಲ್ ಯುದ್ಧ ವಿಮಾನ ಹಾರಿಸಿದ್ದ ಮೊದಲ ಮಹಿಳಾ ಪೈಲಟ್ ಶಿವಾಂಗಿ ಸಿಂಗ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿದ್ದಾರೆ.
ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳನ್ನು ನಾಶಮಾಡಲು ಭಾರತ ಆಪರೇಷನ್ ಸಿಂದೂರ್ ನಡೆಸಿದಾಗ, ಪಾಕಿಸ್ತಾನವು ಭಾರತೀಯ ಮಹಿಳಾ ಪೈಲಟ್ ಅನ್ನು ಸೆರೆಹಿಡಿದಿರುವುದಾಗಿ ಹೇಳಿಕೊಂಡಿತ್ತು. ನಂತರ ಪಾಕಿಸ್ತಾನವು ಪೈಲಟ್ ಅನ್ನು ಶಿವಾಂಗಿ ಸಿಂಗ್ ಎಂದು ಗುರುತಿಸಿತ್ತು. ಆದಾಗ್ಯೂ, ಭಾರತವು ಒಂದೇ ಒಂಡು ಫೋಟೊ ಬಿಡುಗಡೆ ಮಾಡುವ ಮೂಲಕ ಪಾಕಿಸ್ತಾನದ ಎಲ್ಲಾ ಸುಳ್ಳುಗಳನ್ನು ಬಹಿರಂಗಪಡಿಸಿದೆ.
ಯುದ್ಧ ವಿಮಾನದಲ್ಲಿ ಕುಳಿತು ಹಾರಾಟ ನಡೆಸುವ ಮೊದಲು ಹರಿಯಾಣದ ಅಂಬಾಲಾ ವಾಯುಪಡೆ ನೆಲೆಯಲ್ಲಿ ಶಿವಾಂಗಿ ಸಿಂಗ್ ಅವರೊಂದಿಗೆ ಫೋಟೊ ತೆಗೆಸಿಕೊಂಡರು. ಶಿವಾಂಗಿ ಸಿಂಗ್ ರಾಷ್ಟ್ರಪತಿ ಮುರ್ಮು ಅವರಿದ್ದ ರಫೇಲ್ ಅನ್ನು ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ವಾಯುನೆಲೆಯಲ್ಲಿ ಹಾಜರಿದ್ದ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಮತ್ತೊಂದು ವಿಮಾನವನ್ನು ಹಾರಿಸಿದ್ದಾರೆ.
ಉತ್ತರ ಪ್ರದೇಶದ ವಾರಾಣಸಿಯ ಫುಲ್ವಾರಿಯಾದಲ್ಲಿ ಜನಿಸಿದ ಶಿವಾಂಗಿ ಸಿಂಗ್ ತಮ್ಮ ಮನೆಯಿಂದ ದೊಡ್ಡ ಕನಸುಗಳನ್ನು ಕಂಡರು. ಅವರ ತಂದೆ ಕುಮಾರೇಶ್ವರ ಸಿಂಗ್, ತಾಯಿ ಸೀಮಾ ಸಿಂಗ್ ಮತ್ತು ಮೂವರು ಒಡಹುಟ್ಟಿದವರು, ಈ ಕುಟುಂಬದಲ್ಲಿ ದೇಶಭಕ್ತಿ ಆಳವಾಗಿ ಬೇರೂರಿತ್ತು. ಅವರ ತಾಯಿಯ ಅಜ್ಜ ಬಿ.ಎನ್. ಸಿಂಗ್, ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿದ್ದರು.

