ಇಂದಿನ ಕಾಲದಲ್ಲಿ ಬಿಯರ್ ಯುವಕರಿಂದ ಹಿಡಿದು ಹಿರಿಯರ ವರೆಗೆ ಜನಪ್ರಿಯವಾಗಿರುವ ಪಾನೀಯವಾಗಿದೆ. ಪಾರ್ಟಿ, ಸಮಾರಂಭ ಅಥವಾ ಮನರಂಜನೆಗೆ ನೆಪ ಮಾಡಿಕೊಂಡು ಹಲವರು ಇದನ್ನು ಹೆಚ್ಚಾಗಿ ಕುಡಿಯುತ್ತಾರೆ. ಆದರೆ ಬಿಯರ್ ಸೇವನೆಯು ತಾತ್ಕಾಲಿಕ ಆನಂದ ನೀಡಿದರೂ, ದೀರ್ಘಾವಧಿಯಲ್ಲಿ ದೇಹ ಮತ್ತು ಮನಸ್ಸಿನ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಅದರ ಕೆಲವು ಪ್ರಮುಖ ದುಷ್ಪರಿಣಾಮಗಳನ್ನು ಇಲ್ಲಿ ನೋಡೋಣ.
ಹೊಟ್ಟೆಯ ಕೊಬ್ಬು ಹೆಚ್ಚಿಸುತ್ತದೆ
ಬಿಯರ್ ಸೇವನೆಯು ಹೊಟ್ಟೆಯ ಸುತ್ತ ಕೊಬ್ಬು ಹೆಚ್ಚಿಸುವ ಪ್ರಮುಖ ಕಾರಣವಾಗಿದೆ. ನಿರಂತರವಾಗಿ ಕುಡಿಯುವುದರಿಂದ ಹೊಟ್ಟೆಯ ಕೊಬ್ಬು ಬೆಳೆಯುತ್ತದೆ ಮತ್ತು ದೇಹದ ತೂಕ ನಿಯಂತ್ರಣ ತಪ್ಪುತ್ತದೆ.

ಜೀರ್ಣಕ್ರಿಯೆಯ ಸಮಸ್ಯೆ
ಬಿಯರ್ ಹೊಟ್ಟೆಯ ಒಳಪದರವನ್ನು ಕೆರಳಿಸುವ ಗುಣ ಹೊಂದಿದೆ. ಇದರಿಂದ ಗ್ಯಾಸ್ಟ್ರಿಕ್, ಆಮ್ಲೀಯತೆ, ವಾಂತಿ ಹಾಗೂ ಅಜೀರ್ಣ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಮದ್ಯದ ಪರಿಣಾಮವಾಗಿ ದೇಹದಲ್ಲಿ ನಿರ್ಜಲೀಕರಣವೂ ಉಂಟಾಗುತ್ತದೆ.
ಮೆದುಳಿನ ಮೇಲೆ ದುಷ್ಪರಿಣಾಮ
ನಿರಂತರವಾಗಿ ಬಿಯರ್ ಸೇವನೆಯು ಮೆದುಳಿನ ಕಾರ್ಯಕ್ಷಮತೆಯನ್ನು ಹಾನಿಗೊಳಿಸುತ್ತದೆ. ಸ್ಮರಣಶಕ್ತಿ ಕುಂದುಕೊರತೆ, ಅರಿವಿನ ಗೊಂದಲ ಮತ್ತು ವಿಟಮಿನ್ ಕೊರತೆಯಿಂದ ಮಾನಸಿಕ ಆರೋಗ್ಯ ಕುಸಿಯುವ ಅಪಾಯ ಹೆಚ್ಚುತ್ತದೆ.

ಹಾರ್ಮೋನುಗಳ ಅಸಮತೋಲನ
ಬಿಯರ್ ಮಹಿಳೆಯರಲ್ಲಿ ಹಾರ್ಮೋನುಗಳ ಸಮತೋಲನವನ್ನು ಕೆಡಿಸುತ್ತದೆ. ಋತುಚಕ್ರದ ವ್ಯತ್ಯಾಸ, ಮನಸ್ಥಿತಿ ಬದಲಾವಣೆ ಮತ್ತು ಈಸ್ಟ್ರೊಜೆನ್ ಮಟ್ಟದಲ್ಲಿ ಏರುಪೇರು ಉಂಟಾಗುತ್ತದೆ. ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಯಾಗಿ ಶಕ್ತಿಯ ಕೊರತೆ ಹಾಗೂ ಆತ್ಮವಿಶ್ವಾಸ ಕುಗ್ಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಯಕೃತ್ತಿನ ಮೇಲೆ ಒತ್ತಡ
ಬಿಯರ್ ಯಕೃತ್ತಿಗೆ ಅತಿಯಾದ ಒತ್ತಡವನ್ನು ಉಂಟುಮಾಡುತ್ತದೆ. ದೀರ್ಘಾವಧಿಯ ಸೇವನೆಯು ಕೊಬ್ಬಿನ ಯಕೃತ್ತು, ಸಿರೋಸಿಸ್ ಹಾಗೂ ಆಲ್ಕೊಹಾಲಿಕ್ ಹೆಪಟೈಟಿಸ್‌ಗಳಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.