February 24, 2026
Tuesday, February 24, 2026
spot_img

SHOCKING | ರಾಜ್ಯದಲ್ಲಿ ಕುಡಿಯುವ ನೀರೂ ಕಲುಷಿತ, ಕೆಮಿಕಲ್ಸ್‌, ಬ್ಯಾಕ್ಟೀರಿಯಾ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿರುವ ತರಕಾರಿಗಳಲ್ಲಿ ಲೆಡ್‌ ಅಂಶ ಪತ್ತೆಯಾಗಿತ್ತು. ಆರೋಗ್ಯಕ್ಕೆ ಬೆಸ್ಟ್‌ ಎಂದು ತಿನ್ನುವ ತರಕಾರಿಯೇ ವಿಷವಾದ್ರೆ ಏನನ್ನು ತಿನ್ನೋದು ಎಂದು ಜನ ಚಿಂತೆಯಲ್ಲಿದ್ರು. ಆದರೆ ಇದೀಗ ಇನ್ನೊಂದು ಆಘಾತಕಾರಿ ವಿಷಯ ಹೊರಬಿದ್ದಿದೆ. ತರಕಾರಿ ಅಷ್ಟೇ ಅಲ್ಲ, ಕುಡಿಯುವ ನೀರಿನಲ್ಲಿಯೂ ಕೆಮಿಕಲ್ಸ್‌ ಹಾಗೂ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೀರಿನ ಸ್ಯಾಂಪಲ್‌ನ್ನು ಸಂಗ್ರಹ ಮಾಡಿದ್ದು, ಜಲಜೀವನ್‌ ಮಿಷನ್‌ ಅಡಿಯಲ್ಲಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ನೀರಿನಲ್ಲಿ ರಾಸಾಯನಿಕ ಹಾಗೂ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ.

9.34 ಲಕ್ಷ ಮಾದರಿಯಲ್ಲಿ 53 ಸಾವಿರ ಮಾದರಿಗಳಲ್ಲಿ ರಾಸಾಯನಿಕ ಅಂಶಗಳು ಪತ್ತೆಯಾಗಿದ್ದರೆ, 7,696 ನೀರಿನ ಸ್ಯಾಂಪಲ್​​ಗಳಲ್ಲಿ ಬ್ಯಾಕ್ಟೀರಿಯಾ ಅಂಶಗಳು ಕಂಡುಬಂದಿವೆ.

ಯಾಕೆ ಹೀಗೆ?
ಕೊಳಚೆ ನೀರು, ಕೈಗಾರಿಕೆಗಳಿಂದ ಬರುವ ಕೆಟ್ಟ ನೀರು ಹಾಗೂ ತ್ಯಾಜ್ಯ, ಟ್ಯಾಂಕರ್‌ಗಳಲ್ಲಿ ಫಂಗಸ್‌ ಆದರೂ ಕ್ಲೀನ್‌ ಮಾಡಿಸದೇ ನೀರನ್ನು ನೀಡುವುದು ಇನ್ನಿತರ ಕಾರಣಗಳಿಂದ ಸಮಸ್ಯೆ ಉದ್ಭವವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !