Saturday, October 11, 2025

ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್ ಯಿಂದ ಡ್ರಾಪ್: ಮೊಹಮ್ಮದ್‌ ಶಮಿ ಹೇಳಿದ್ದೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್ ಗೂ ಭಾರತ ತಂಡದಿಂದ ತನ್ನನ್ನು ಕೈ ಬಿಟ್ಟ ಬಗ್ಗೆ ವೇಗಿ ಮೊಹಮ್ಮದ್‌ ಶಮಿ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ.

2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಮೊಹಮ್ಮದ್‌ ಶಮಿ ಕೊನೆಯ ಬಾರಿ ಭಾರತ ತಂಡದ ಪರ ಆಡಿದ್ದರು.

ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಮೊಹಮ್ಮದ್‌ ಶಮಿ, ತಮ್ಮ ಫಿಟ್‌ನೆಸ್‌ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದುರಾಗಿದ್ದವು ಎಂದು ಹೇಳಿಕೊಂಡಿದ್ದಾರೆ.

ತಂಡಕ್ಕೆ ಆಯ್ಕೆಯಾಗುವುದು ನನ್ನ ಕೈಯಲ್ಲಿ ಇಲ್ಲ. ಇದು ಆಯ್ಕೆ ಸಮಿತಿ, ಕೋಚ್‌ ಹಾಗೂ ನಾಯಕನ ಕೆಲಸವಾಗಿದೆ. ಅವರು ಮನಸು ಮಾಡಿ ನನ್ನನ್ನು ಆಯ್ಕೆ ಮಾಡಿದರೆ ನಾನು ತಂಡದಲ್ಲಿ ಇರುತ್ತೇನೆ, ಇಲ್ಲವಾದಲ್ಲಿ ಇಲ್ಲ. ನನಗೆ ಇನ್ನಷ್ಟು ಹೆಚ್ಚಿನ ಸಮಯದ ಅಗತ್ಯವಿದೆ ಎನ್ನುವುದಾದರೆ, ಅದು ಅವರ ಕರೆಯಾಗಿದೆ. ಅವರು ಕರೆ ಮಾಡಿದಾಗ ನಾನು ಆಡಲು ಸಿದ್ದ ಎಂದು ಶಮಿ ಹೇಳಿದ್ದಾರೆ.

ತಮ್ಮ ಫಿಟ್‌ನೆಸ್‌ ಬಗ್ಗೆ ಮಾತನಾಡಿದ ಮೊಹಮ್ಮದ್‌ ಶಮಿ, ಫಿಟ್‌ನೆಸ್‌ ಬಗ್ಗೆ ಒಳ್ಳೆಯ ಭಾವನೆ ಉಂಟಾಗುತ್ತಿದೆ ಹಾಗೂ ಎಂದಿನಂತೆ ಸಾಮಾನ್ಯವಾಗಿ ಲಯದಲ್ಲಿ ಬೌಲ್‌ ಮಾಡುತ್ತಿದ್ದೇನೆ. ಶಮಿ ಕೊನೆಯ ಬಾರಿ ಈಸ್ಟ್‌ ಝೋನ್‌ ಪರ ದುಲೀಪ್‌ ಟ್ರೋಫಿ ಟೂರ್ನಿಯಲ್ಲಿ ಆಡಿದ್ದರು. ಇಲ್ಲಿ ಅವರು ಒಟ್ಟು 34 ಓವರ್‌ಗಳನ್ನು ಬೌಲ್‌ ಮಾಡಿದ್ದರು. ತಂಡದಿಂದ ದೂರ ಉಳಿದರೂ ಪ್ರೇರಣೆಯೊಂದಿಗೆ ಉಳಿಯುವುದು ಇಲ್ಲ ತುಂಬಾ ಮುಖ್ಯ. ಭಾರತ ತಂಡದ ಪರ ಆಡಲು ಇನ್ನಷ್ಟು ಉತ್ತಮವಾಗಲು ಪ್ರಯತ್ನಿಸುತ್ತಿದ್ದೇನೆ ಎಂದಿದ್ದಾರೆ.

ಇನ್ನಷ್ಟು ಉತ್ತಮವಾಗಲು ನಾನು ಪ್ರಯತ್ನಿಸುತ್ತಿದ್ದೇನೆ ಏಕೆಂದರೆ ಮೈದಾನದಿಂದ ಹೊರಗೆ ಉಳಿದರೆ, ನೀವು ಪ್ರೇರೇಪಿತರಾಗಿ ಉಳಿಯುವುದು ತುಂಬಾ ಅಗತ್ಯವಾಗಿದೆ. ನಾನು ದುಲೀಪ್‌ ಟ್ರೋಫಿ ಟೂರ್ನಿಯಲ್ಲಿ ಆಡಿದ್ದೇನೆ. ನಾನು ಆರಾಮದಾಯಕವಾಗಿದ್ದೇನೆ, ನನ್ನ ಲಯ ಉತ್ತಮವಾಗಿದೆ ಎಂಬ ಭಾವನೆ ನನಗೆ ಉಂಟಾಗಿತ್ತು. ಅಲ್ಲಿ ನಾನು 35 ಓವರ್‌ಗಳನ್ನು ಬೌಲ್‌ ಮಾಡಿದ್ದೆ. ಅಂದ ಹಾಗೆ ನನ್ನ ಫಿಟ್‌ನೆಸ್‌ನಲ್ಲಿ ಯಾವುದೇ ಸಮಸ್ಯೆಗಳು ಇಲ್ಲ ಎಂದು ಮೊಹಮ್ಮದ್‌ ಶಮಿ ತಿಳಿಸಿದ್ದಾರೆ.

error: Content is protected !!