Tuesday, September 16, 2025

ಮಾದಕ ದ್ರವ್ಯ ಕಳ್ಳಸಾಗಣೆ: ಭಾರತದಿಂದ 16,000 ವಿದೇಶೀಯರು ಗಡಿಪಾರು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆಯಲ್ಲಿ ಭಾಗಿಯಾದ ಆರೋಪದ ಮೇಲೆ ಸುಮಾರು 16,000 ವಿದೇಶೀಯರನ್ನು ಗಡಿಪಾರು ಮಾಡಲು ಗೃಹ ಸಚಿವಾಲಯ ಸಿದ್ಧತೆ ನಡೆಸಿದೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಲ್ಲಿಸಿದ ವರದಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಈ ವಿದೇಶೀಯರು ಮಾದಕ ದ್ರವ್ಯ ಕಳ್ಳಸಾಗಣೆಯಿಂದ ಹಿಡಿದು ಸಾಗಾಣಿಕೆಯವರೆಗಿನ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದ್ದು, ಹಲವು ರಾಜ್ಯಗಳ ಕಸ್ಟಡಿ ಕೇಂದ್ರಗಳಲ್ಲಿ ಬಂಧಿತರಾಗಿದ್ದಾರೆ.

NCB ಸಿದ್ಧಪಡಿಸಿದ ವಿದೇಶೀಯರ ಪಟ್ಟಿಯನ್ನು ಗೃಹ ಸಚಿವಾಲಯಕ್ಕೆ ಮತ್ತು ಸಂಬಂಧಿತ ಏಜೆನ್ಸಿಗಳಿಗೆ ಒಪ್ಪಿಸಲಾಗಿದೆ. ಹೊಸ ವಲಸೆ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಗಡೀಪಾರು ಪ್ರಕ್ರಿಯೆ ನಡೆಯಲಿದೆ.

ಗಡಿಪಾರಿಗೆ ಒಳಗಾಗುವ ವಿದೇಶೀಯರು ವಿವಿಧ ದೇಶಗಳಿಂದ ಬಂದವರಾಗಿದ್ದು, ದೇಶಾದ್ಯಂತದ ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ಗಡಿಭಾಗಗಳಲ್ಲಿ ಮಾದಕ ದ್ರವ್ಯ ಸಾಗಾಣಿಕೆಯಲ್ಲಿ ತೊಡಗಿದ್ದಾರೆ. ಕೆಲವರು ಸ್ಥಳೀಯ ದಂಧೆಕೋರರೊಂದಿಗೆ ಸಂಪರ್ಕ ಹೊಂದಿದ್ದಾರೆ. ಈ ಆರೋಪಿಗಳನ್ನು ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಂಧಿಸಲಾಗಿದೆ.

ಗೃಹ ಸಚಿವಾಲಯವು ಗಡೀಪಾರು ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಿದ್ಧತೆ ನಡೆಸಿದೆ. ವಿದೇಶೀ ರಾಯಭಾರ ಕಚೇರಿಗಳೊಂದಿಗೆ ಸಮನ್ವಯದಿಂದ ಈ ಕಾರ್ಯಾಚರಣೆ ನಡೆಯಲಿದೆ. ಈ ಕ್ರಮವು ಭಾರತದಲ್ಲಿ ಕಾನೂನಿನ ಶಾಂತಿ ಮತ್ತು ಸುರಕ್ಷತೆಯನ್ನು ಬಲಪಡಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ