ಹೊಸದಿಗಂತ ಲಕ್ಷ್ಮೇಶ್ವರ:
ಪಟ್ಟಣದ ಪ್ರತಿಷ್ಠಿತ ಎಮ್.ಎ ಕಾಲೇಜಿನ ಹಿಂಭಾಗದ ಸಾರ್ವಜನಿಕ ಬಯಲು ಜಾಗದಲ್ಲಿ ಗಾಂಜಾ ಸೇದುತ್ತಿದ್ದ ಇಬ್ಬರು ಹಾಗೂ ಅವರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಲಕ್ಷ್ಮೇಶ್ವರ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಪಟ್ಟಣದ ನಿವಾಸಿಗಳಾದ ಬಾಬಾಜಾನ ಕುಡಚಿ ಹಾಗೂ ಹಜರತಅಲಿ ಶಿರುಡಗಿ ಎಂಬುವವರು ಸಿಗರೇಟ್‌ನಲ್ಲಿ ಗಾಂಜಾ ಪುಡಿಯನ್ನು ತುಂಬಿಕೊಂಡು ಸೇದುತ್ತಿದ್ದರು. ಈ ವೇಳೆ ಸವಣೂರು ಮೂಲದ ಸಬಿಲ್ ಬಂಕಾಪುರ ಎಂಬಾತ ಇವರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಟಿ.ಕೆ. ರಾಥೋಡ್ ಹಾಗೂ ಅವರ ತಂಡ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ದಾಳಿಯ ವೇಳೆ ಪೊಲೀಸರು ಸುಮಾರು 73 ಗ್ರಾಂ ತೂಕದ (ಅಂದಾಜು 2,190 ರೂ. ಮೌಲ್ಯದ) ಒಣ ಗಾಂಜಾ ಹಾಗೂ ಗಾಂಜಾ ತುಂಬಿದ್ದ ಎರಡು ಅರ್ಧ ಸುಟ್ಟ ಸಿಗರೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಸದ್ಯ ಈ ಕುರಿತು ಲಕ್ಷ್ಮೇಶ್ವರ ಪಿಎಸ್‌ಐ ನಾಗರಾಜ ಗಡದ ಅವರು ಪ್ರಕರಣ ದಾಖಲಿಸಿಕೊಂಡಿದ್ದು, ಗಾಂಜಾ ಜಾಲದ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.



