Friday, October 31, 2025

ಅರಮನೆಯಲ್ಲಿ ಕಳೆಗಟ್ಟಿದ ದಸರಾ ಸಂಭ್ರಮ: ಬೆಳಗ್ಗೆಯಿಂದಲೇ ಚಂಡಿಕಾ ಹೋಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಮನೆ ಮಾಡಿದೆ. ಬೆಳಗ್ಗೆಯಿಂದಲೇ ಸಾಂಪ್ರದಾಯಿಕ ಪೂಜೆ-ಪುನಸ್ಕಾರಗಳು ನಡೆಯಲಿದೆ. 

ರಾಜ ಪರಂಪರೆಯಂತೆ ಶುಕ್ರವಾರ ಬೆಳಗ್ಗೆ ಯದುವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜಾ ಕೈಂಕರ್ಯ ನೆರವೇರಿಸಿದರು. ಬೆಳಗ್ಗೆ 6 ಗಂಟೆಯಿಂದ ಆರಂಭವಾಗಿರುವ ಚಂಡಿಕಾ ಹೋಮ ನಡೆಯುತ್ತಿದೆ.

ಮೈಸೂರು ಅರಮನೆಯಲ್ಲಿ ಆಯುಧಪೂಜೆ ಸಂಭ್ರಮ ಮಾಡಿದೆ. ಚಂಡಿಯಾದಲ್ಲಿ ಯದುವೀರರಿಂದ ಪೂಜೆ, ಪೂರ್ಣಾಹುತಿ ಕಾರ್ಯ ನಡೆದಿದೆ. 7.55ಕ್ಕೆ ಅರಮನೆಯಿಂದ ಕೋಡಿ ಸೋಮೇಶ್ವರ ದೇವಾಲಯಕ್ಕೆ ಆಯುಧಗಳನ್ನ ಪಲ್ಲಕ್ಕಿಯಲ್ಲಿ ರವಾನಿಸಲಾಗಿದೆ.

ಶುಚಿಗೊಳಿಸಿದ ಬಳಿಕ ಆಯುಧಗಳನ್ನ ಪಲ್ಲಕಿಯಲ್ಲಿ ವಾಪಸ್ ಅರಮನೆಗೆ ರವಾನೆ ಮಾಡಲಾಗಿದೆ. ಅರಮನೆಯ ಆನೆ ಬಾಗಿಲು ಮೂಲಕ ಕಲ್ಯಾಟಮಂಟಪಕ್ಕೆ ಕೊಂಡೊಯ್ದು ಜೋಡಣೆ ಕಾರ್ಯ ನಡೆದಿದೆ.

ಸಿಂಹಾಸನಕ್ಕೆ ಜೋಡಿಸಿದ್ದ ಸಿಂಹಕ್ಕೆ ಪೂಜೆ ಯದುವೀರರು ಪೂಜೆ ಸಲ್ಲಿಸಲಿದ್ದಾರೆ. ಆ ನಂತರ ರಾಜಪುರೋಹಿತರ ಮಾರ್ಗದರ್ಶನದಂತೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಯುಧ ಪೂಜೆ ನರೆವೇರಿಸಲಿದ್ದಾರೆ.

error: Content is protected !!